Publish Date: Tue, 01 Aug 2017 (09:49 IST)
Updated Date: Tue, 01 Aug 2017 (09:51 IST)
ನವದೆಹಲಿ: ಹೆಂಡತಿ ಬೇಡಿಕೆಯಿಟ್ಟರೆ ಮುಗಿಯಿತು. ಈ ಬಗ್ಗೆ ಹಲವು ಜೋಕ್ ಗಳಿವೆ. ಆದರೆ ಇಲ್ಲೊಬ್ಬ ಭೂಪ ಹೆಂಡತಿಯ ಸೀರೆ ಬೇಡಿಕೆ ಪೂರೈಸಲು ಬೇರೆ ದಾರಿಯಿಲ್ಲದೆ ಕದ್ದು ಸಿಕ್ಕಿಬಿದ್ದಿದ್ದಾನೆ.
ಛತ್ತೀಸ್ ಘಡದಲ್ಲಿ ಇಂತಹದ್ದೊಂದು ಘಟನೆ ನಡೆದಿದೆ. ಹೆಂಡತಿಗೆ ಸೌಂದರ್ಯ ಸ್ಪರ್ಧೆಯಲ್ಲಿ ಭಾಗವಹಿಸುವ ಆಸೆಯಾಗಿದೆ. ಆದರೆ ಸೌಂದರ್ಯ ಸ್ಪರ್ಧೆಗೆ ತೊಡುವಂತಹ ಡಿಸೈನರ್ ಸೀರೆ ತಂದುಕೊಡಲು ಜೇಬಿನಲ್ಲಿ ದುಡ್ಡಿರಲಿಲ್ಲ. ಏನು ಮಾಡೋದು?
ವೃತ್ತಿಯಲ್ಲಿ ಶಿಕ್ಷಕನಾಗಿರುವ ಈತ ಹೆಂಡತಿಯ ಆಸೆ ಪೂರೈಸಲು ಸ್ಥಳೀಯ ಬಟ್ಟೆ ಅಂಗಡಿಯೊಂದಕ್ಕೆ ಕನ್ನ ಹಾಕಿದ್ದಾನೆ. ಅಲ್ಲದೆ 50 ಸಾವಿರ ರೂ. ಮೌಲ್ಯದ ಸೀರೆ ಕದ್ದಿದ್ದಾನೆ. ಬಳಿಕ ತಗೋ ನಿನಗೆ ಗಿಫ್ಟ್ ಎಂದು ಹೆಂಡತಿಗೆ ಕೊಟ್ಟಿದ್ದಾನೆ. ಆಕೆಗೆ ಖುಷಿಯೋ ಖುಷಿ. ಆ ಸೀರೆ ತೊಟ್ಟುಕೊಂಡು ಮಿಂಚಿದ್ದೇ ಮಿಂಚಿದ್ದು.
ಆದರೆ ಅವರ ದುರಾದೃಷ್ಟ ನೋಡಿ, ಆ ಕಾರ್ಯಕ್ರಮದಲ್ಲಿ ಆ ಅಂಗಡಿಯ ನೌಕರನೂ ಒಬ್ಬ ಇದ್ದ. ಆತನಿಗೆ ಇದು ತಮ್ಮ ಅಂಗಡಿಯಿಂದ ಕಳ್ಳತನವಾದ ಸೀರೆ ಎಂದು ಗೊತ್ತಾಯಿತು. ತಕ್ಷಣ ಪೊಲೀಸರಿಗೆ ದೂರು ನೀಡಿದ. ವಿಚಾರಣೆ ವೇಳೆ ಎಲ್ಲಾ ಸಂಗತಿ ಬಯಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ