Publish Date: Tue, 25 Jul 2017 (13:30 IST)
Updated Date: Tue, 25 Jul 2017 (13:33 IST)
ಅಂಗಡಿ ಮಾಲೀಕನೊಂದಿಗೆ ನಡೆದ ಎರಡು ರೂಪಾಯಿಗಳ ಜಗಳದಲ್ಲಿ ಅಪರಿಚಿತ ಗ್ರಾಹಕನೊಬ್ಬ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ ಘಟನೆ ವರದಿಯಾಗಿದೆ.
ಗಾಯಗೊಂಡ ಮಾಲೀಕ ರೋಹಿತ್ ಕುಮಾರ್‌ನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದ್ದು ಅಪಾಯದಿಂದ ಪಾರಾಗಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ಅಪರಿಚಿತ ಗ್ರಾಹಕನೊಬ್ಬ ಸೀಗರೇಟು ಕೊಡುವಂತೆ 10 ರೂಪಾಯಿಗಳನ್ನು ಅಂಗಡಿ ಮಾಲೀಕನಿಗೆ ನೀಡಿದ್ದಾನೆ. ಆದರೆ, ಸಿಗರೇಟು ಮೌಲ್ಯ 12 ರೂಪಾಯಿಗಳಾಗಿದ್ದರಿಂದ ಇನ್ನೆರೆಡು ರೂಪಾಯಿ ಕೊಡುವಂತೆ ಮಾಲೀಕ ಕೇಳಿದ್ದಾನೆ. ಆದರೆ, ಗ್ರಾಹಕ ಕೊಡಲು ನಿರಾಕರಿಸಿದ್ದಾನೆ. ಇಬ್ಬರ ನಡುವೆ ವಾಗ್ವಾದ ನಡೆದಿದೆ. ವಾಗ್ವಾದ ವಿಕೋಪಕ್ಕೆ ತೆರಳಿದಾಗ ಗ್ರಾಹಕ ಚಾಕುವಿನಿಂದ ಇರಿದು ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಅಪರಿಚಿತ ಗ್ರಾಹಕನ ವಿರುದ್ಧ ಪ್ರಕರಣ ದಾಖಲಿಸಲಾಗಿದ್ದು, ಪೊಲೀಸರು ಆರೋಪಿಯ ಪತ್ತೆಗಾಗಿ ಜಾಲ ಬೀಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿರುವ ಸಿಸಿಟಿವಿಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.