Publish Date: Fri, 06 Jan 2017 (19:36 IST)
Updated Date: Fri, 06 Jan 2017 (19:39 IST)
ಸೆಕ್ಸ್ ಸುಖ ನೀಡಲು ನಿರಾಕರಿಸಿದ 20 ವರ್ಷದ ಯುವತಿಯೊಬ್ಬಳನ್ನು ಆರೋಪಿಯೊಬ್ಬ ಗಂಟಲು ಕತ್ತರಿಸಿದ ಆಘಾತಕಾರಿ ಘಟನೆ ವರದಿಯಾಗಿದೆ. ಯುವತಿಯ ಪರಿಸ್ಥಿತಿ ಗಂಭೀರವಾಗಿದ್ದು ಆರೋಪಿ ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಎರಡು ಮಕ್ಕಳ ತಂದೆಯಾದ ಆರೋಪಿ ನರೇಶ್, ಯುವತಿಯೊಂದಿಗೆ ಸೆಕ್ಸ್ ಸಂಬಂಧ ಹೊಂದಲು ಬಯಸಿದ್ದ. ಆದರೆ, ಆಕೆ ನೇರವಾಗಿ ನಿರಾಕರಿಸಿದ್ದರಿಂದ ಒಳಗೊಳಗೆ ಕುದಿಯುತ್ತಿದ್ದನು ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ನರೇಶ್ ಮತ್ತು ಯುವತಿ ಒಂದೇ ಕಂಪೆನಿಯಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಗೆಳೆಯನ ನಿವಾಸಕ್ಕೆ ತೆರಳಲು ಜೊತೆಯಾಗುವಂತೆ ಯುವತಿಗೆ ಕೋರಿದ್ದಾನೆ. ಬೈಕ್‌ನಲ್ಲಿ ತೆರಳುತ್ತಿರುವಾಗ ಸೆಕ್ಸ್ ಸುಖ ಕೊಡುವಂತೆ ಕೋರಿದ್ದಾನೆ. ಆಕೆ ತಿರಸ್ಕರಿಸಿದಾಗ ಕೋಪಗೊಂಡ ನರೇಶ್ ಚಾಕುವಿನಿಂದ ಆಕೆಯ ಗಂಟಲನ್ನು ಕತ್ತರಿಸಿ ಪರಾರಿಯಾಗಿದ್ದಾನೆ.
ಮಹಿಳೆ ಜೋರಾಗಿ ಕೂಗುತ್ತಿರುವುದನ್ನು ನೋಡಿದ ಗ್ರಾಮಸ್ಥರು ರಕ್ತದ ಮಡುವಿನಲ್ಲಿ ಬಿದ್ದಿದ್ದ ಆಕೆಯನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿದ್ದಾರೆ. ಸ್ಥಳೀಯರು ಕೂಡಲೇ ಪೊಲೀಸ್ ಠಾಣೆಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.