Publish Date: Thu, 04 Jun 2026 (08:33 IST)
Updated Date: Thu, 04 Jun 2026 (08:40 IST)
ವಿದ್ಯುತ್ ಶಾಕ್ ತಗುಲಿ ಪ್ರಾಣವನ್ನೇ ಕಳೆದುಕೊಳ್ಳುವ ಹಂತದಲ್ಲಿದ್ದಾಗ ಸಹೋದ್ಯೋಗಿಯನ್ನು ರೋಚಕವಾಗಿ ಕಾಪಾಡಿದ ವ್ಯಕ್ತಿಯ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ.
ಕೆಲಸ ಮಾಡುವ ಸ್ಥಳದಲ್ಲಿ ಅಜಾಗರೂಕತೆಯಿಂದ ವಿದ್ಯುತ್ ಶಾಕ್ ತಗುಲಿ ಕ್ಷಣಾರ್ಧದಲ್ಲಿ ಸುಟ್ಟು ಭಸ್ಮವಾದ ಅನೇಕ ಘಟನೆಗಳನ್ನು ನಾವು ನೋಡಿದ್ದೇವೆ. ಇದೇ ರೀತಿ ಇಲ್ಲೂ ಈ ವ್ಯಕ್ತಿ ಸ್ವಲ್ಪ ಹೆಚ್ಚು ಕಮ್ಮಿಯಾಗಿದ್ರೂ ಪ್ರಾಣ ಕಳೆದುಕೊಳ್ಳಬೇಕಾಗಿತ್ತು.
ಬೃಹತ್ ಗಾತ್ರದ ಕಬ್ಬಿಣದ ಗೇಟ್ ಹಾಕುವಾಗ ಅಕಸ್ಮಾತ್ತಾಗಿ ಅದು ಹೈಟೆನ್ಷನ್ ವೈರ್ ಗೆ ಟಚ್ ಆಗುತ್ತದೆ. ಇದರಿಂದಾಗಿ ಗೇಟ್ ಹಾಕುತ್ತಿದ್ದ ವ್ಯಕ್ತಿಗೆ ವಿದ್ಯುತ್ ತಗುಲಿ ಆತ ನಿಂತಲ್ಲಿಯೇ ಸುಟ್ಟು ಕರಕಲಾಗುವ ಹಂತದಲ್ಲಿದ್ದ.
ಆದರೆ ಇದನ್ನು ಗಮನಿಸಿದ ವ್ಯಕ್ತಿಯೊಬ್ಬ ಓಡಿ ಬಂದು ತನ್ನ ಬೂಟುಗಾಲಿನಿಂದ ಜೋರಾಗಿ ಆ ವ್ಯಕ್ತಿಗೆ ಒದ್ದು ದೂರ ತಳ್ಳುತ್ತಾನೆ. ಇದರಿಂದ ಆತನಿಗೂ ಶಾಕ್ ತಗುಲುವುದಿಲ್ಲ. ಜೊತೆಗೆ ವಿದ್ಯುತ್ ಶಾಕ್ ಹೊಡೆಸಿಕೊಂಡವನೂ ನೆಲಕ್ಕೆ ಬೀಳುವುದರಿಂದ ಹೆಚ್ಚಿನ ಅಪಾಯ ಸಂಭವಿಸುವುದಿಲ್ಲ. ಈ ರೋಚಕ ವಿಡಿಯೋ ಇಲ್ಲಿದೆ ನೋಡಿ.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ