ವರದಕ್ಷಿಣೆ ವಿವಾದದ ಹಿನ್ನೆಲೆಯಲ್ಲಿ ಪತ್ನಿಯನ್ನು ಸೆಲ್ಫಿ ತೆಗೆಯುವ ನೆಪದಲ್ಲಿ ಕರೆದುಕೊಂಡು ಹೋಗಿ ಗಂಗಾನದಿಯ ಕೆನಾಲ್‌ಗೆ ತಳ್ಳಿದ ಪತಿಯನ್ನು ಪೊಲೀಸರು ಬಂಧಿಸಿದ್ದಾರೆ
ಕಳೆದ ಎರಡು ವರ್ಷಗಳ ಹಿಂದೆ ವಿವಾಹವಾಗಿದ್ದ ಅಯೇಶಾ ಮತ್ತು ಅಫ್ತಾಬ್ ದಂಪತಿಗಳಿಗೆ ಎಂಟು ತಿಂಗಳ ಮಗುವಿದೆ.
ಆರೋಪಿ ಪತಿ ಪ್ರತಿನಿತ್ಯ ವರದಕ್ಷಿಣೆ ತರುವಂತೆ ಪುತ್ರಿಗೆ ಕಿರುಕುಳ ನೀಡುತ್ತಿದ್ದು, ವರದಕ್ಷಿಣೆ ತಾರದ ಹಿನ್ನೆಲೆಯಲ್ಲಿ ಆಕೆಯ ಹತ್ಯೆ ಮಾಡಿದ್ದಾನೆ ಎಂದು ಆಯೇಶಾ ಪೋಷಕರು ಆರೋಪಿಸಿದ್ದಾರೆ.
ಪತಿ ಅಫ್ತಾಬ್ ಹೆಚ್ಚು ಹೆಚ್ಚು ವರದಕ್ಷಿಣೆ ತರುವಂತೆ ಪತ್ನಿ ಆಯೇಶಾಗೆ ಕಿರುಕುಳ ನೀಡುತ್ತಿದ್ದ. ಆದರೆ, ಆಯೇಶಾ ಪೋಷಕರು ಬಡವರಾಗಿದ್ದರಿಂದ ಅಳಿಯನ ಬೇಡಿಕೆ ಈಡೇರಿಸಲು ಸಾಧ್ಯವಾಗಿರಲಿಲ್ಲ. ಆದ್ದರಿಂದ, ಆಕೆಯನ್ನು ಪತಿ ಅಫ್ತಾಬ್ ಹತ್ಯೆ ಮಾಡಿದ್ದಾನೆ ಎಂದು ಆಯೋಶಾ ಸಹೋದರ ನಯೀಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಹತ್ಯೆ ಪ್ರಕರಣವನ್ನು ಮಚ್ಚಿಹಾಕಲು ಪತಿ ಅಫ್ತಾಬ್, ಪತ್ನಿ ಆಯೇಶಾಳನ್ನು ಹತ್ಯೆ ಮಾಡಿದ ನಂತರ ತನ್ನ ಎಂಟು ತಿಂಗಳ ಮಗುವಿನೊಂದಿಗೆ ಪೊಲೀಸ್ ಠಾಣೆಗೆ ತೆರಳಿ, ಕೆಲವು ಗುಂಡಾಗಳು ನಮ್ಮನ್ನು ದರೋಡೆ ಮಾಡಲು ಯತ್ನಿಸಿದ್ದಲ್ಲದೇ ಪತ್ನಿಯನ್ನು ಗಂಗಾ ಕೆನಾಲ್‌ಗೆ ದೂಡಿದ್ದಾರೆ ಎಂದು ದೂರು ದಾಖಲಿಸಿದ್ದಾನೆ.
ಪ್ರಕರಣದ ವಿಚಾರಣೆ ನಡೆಸಿದ ಪೊಲೀಸರಿಗೆ ಅಫ್ತಾಬ್ ನಡುವಳಿಕೆ ಮತ್ತು ಹೇಳಿಕೆ ಸಂಶಯ ಮೂಡಿಸಿದ್ದರಿಂದ ಕರೆದು ಪೊಲೀಸ್ ರೀತಿಯಲ್ಲಿ ವಿಚಾರಣೆ ನಡೆಸಿದಾಗ ಸತ್ಯ ಒಪ್ಪಿಕೊಂಡಿದ್ದಾನೆ. ಆರೋಪಿಯ ವಿರುದ್ಧ ಹತ್ಯಾ ಪ್ರಕರಣ ಸೇರಿದಂತೆ ಕೆಲವು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ.