Select Your Language

Notifications

webdunia
webdunia
webdunia
webdunia

ಅನೈತಿಕ ಸಂಬಂಧ ಶಂಕೆ: ಪತ್ನಿ-ಮಗಳನ್ನು ಕೊಲೆಗೈದು ಆತ್ಮಹತ್ಯೆ

ಅನೈತಿಕ ಸಂಬಂಧ ಶಂಕೆ: ಪತ್ನಿ-ಮಗಳನ್ನು ಕೊಲೆಗೈದು ಆತ್ಮಹತ್ಯೆ
ನವದೆಹಲಿ , ಶನಿವಾರ, 2 ಜುಲೈ 2016 (14:44 IST)
ಪತ್ನಿಗೆ ಬೇರೊಬ್ಬನ ಜತೆ ಸಂಬಂಧ ಇದೆ ಎಂಬ ಸಂಶಯಕ್ಕೊಳಗಾಗಿದ್ದ 50 ವರ್ಷದ ವ್ಯಕ್ತಿಯೊಬ್ಬ ಪತ್ನಿ ಮತ್ತು 6 ವರ್ಷದ ಮಗಳನ್ನು ಕೊಂದು ತಾನು ಕೂಡ ಆತ್ಮಹತ್ಯೆಗೆ ಶರಣಾದ ಕರಾಳ ಘಟನೆ ದಕ್ಷಿಣ ದೆಹಲಿಯ ಸಂಜಯ್ ಕಾಲೋನಿಯಲ್ಲಿ ಗುರುವಾರ ರಾತ್ರಿ ನಡೆದಿದೆ. 
 
ಮೃತನನ್ನು ಮಹೇಶ್ ಚೌಹಾನ್ ಎಂದು ಗುರುತಿಸಲಾಗಿದೆ. ನಾಲ್ಕು ಅಂತಸ್ತಿನ ಕಟ್ಟಡದ ಪ್ರಥಮ ಮಹಡಿಯಲ್ಲಿ ವಾಸಿಸುತ್ತಿದ್ದ ಚೌಹಾನ್ ಮೊದಲು ಪತ್ನಿ ರಂಜನಾ ಅಲಿಯಾಸ್ ಲಕ್ಷ್ಮಿ(38)ಯ ದೊಣ್ಣೆಯಿಂದ ತಲೆಗೆ ಹೊಡೆದು ಕೊಂದಿದ್ದಾನೆ. ಬಳಿಕ ಪುತ್ರಿ ಲಾಡೋವನ್ನು ಸಹ ಉಸಿರುಗಟ್ಟಿಸಿ ಹತ್ಯೆಗೈದಿದ್ದಾನೆ. ಬಳಿಕ ತಾನು ಕೂಡ ವಿಷ ಸೇವಿಸಿ ಸಾವಿಗೆ ಶರಣಾಗಿದ್ದಾನೆ. ಅದೇ ಕಟ್ಟಡದ ನೆಲ ಮಹಡಿಯಲ್ಲಿ ವಾಸಿಸುತ್ತಿದ್ದ ಮೃತರ ಸಂಬಂಧಿಕನಿಂದ ಪ್ರಕರಣ ಬೆಳಕಿಗೆ ಬಂದಿದೆ. 
 
ಪತಿ ಮತ್ತು ಪತ್ನಿಗೂ ಸಹ ಇದು ಎರಡನೆಯ ವಿವಾಹವಾಗಿದ್ದು ಅವರಿಬ್ಬರಲ್ಲಿ ಸದಾ ಜಗಳವಾಗುತ್ತಿತ್ತು ಎಂದು ತಿಳಿದು ಬಂದಿದೆ. ಚೌಹಾನನ ಕುಡಿತದ ಅಭ್ಯಾಸ ಮತ್ತು ಆರ್ಥಿಕ ದುಃಸ್ಥಿತಿ ಅವರಿಬ್ಬರಲ್ಲಿ ಜಗಳಕ್ಕೆ ಕಾರಣವಾಗುತ್ತಿತ್ತು. ಜತೆಗೆ ತನ್ನ ಪತ್ನಿಯ ಮೇಲೆ ಚೌಹಾನ್ ವಿಪರೀತ ಅನುಮಾನ ಹೊಂದಿದ್ದ ಎಂದು ಪೊಲೀಸ್ ವಿಚಾರಣೆಯಿಂದ ತಿಳಿದುಬಂದಿದೆ.


ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಚಿನ್ನಾಭರಣ ದೋಚಿ ಪ್ರಿಯಕರನೊಂದಿಗೆ ಪತ್ನಿ ಪರಾರಿ