ಆಘಾತಕಾರಿ ಘಟನೆಯೊಂದರಲ್ಲಿ ಸಹೋದರಿಯರನ್ನು ರಕ್ಷಿಸಲು ಹೋದ ಸಹೋದರನ್ನು ರೌಡಿಗಳು ಗುಂಡು ಹಾರಿಸಿ ಹತ್ಯೆಗೈದ ಹೃದಯವಿದ್ರಾವಕ ಘಟನೆ ವರದಿಯಾಗಿದೆ.
ಸಹೋದರ ಚಂದ್ರಶೇಖರ್ ತನ್ನ ಇಬ್ಬರು ಸಹೋದರಿಯರೊಂದಿಗೆ ಬುಧವಾರದಂದು ರಾತ್ರಿ ಛಾಟಾ ಗ್ರಾಮದಿಂದ ಡೀಗ್ ಗ್ರಾಮಕ್ಕೆ ತೆರಳುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಚಂದ್ರಶೇಖರ್ ತನ್ನ ಇಬ್ಬರು ಸಹೋದರಿಯರೊಂದಿಗೆ ತೆರಳುತ್ತಿದ್ದ ದಾರಿಯನ್ನು ಅಡ್ಡಗಟ್ಟಿದ ರೌಡಿಗಳು, ಚಿನ್ನಾಭರಣ, ಹಣ ದೋಚುವ ವಿಫಲ ಪ್ರಯತ್ನ ಮಾಡಿದರು. ಚಂದ್ರಶೇಖರ್ ಸಹೋದರಿಯನ್ನು ರಕ್ಷಿಸಲು ಮುಂದಾದಾಗ ರೌಡಿಗಳಿಂದ ಗುಂಡೇಟಿಗೆ ಬಲಿಯಾಗಿದ್ದಾನೆ ಎನ್ನಲಾಗಿದೆ.
ರೌಡಿಗಳ ವಿರುದ್ಧ ಹತ್ಯೆ ಪ್ರಕರಣ ದಾಖಲಿಸಲಾಗಿದ್ದು, ಆರೋಪಿಗಳ ಪತ್ತೆಗಾಗಿ ಜಾಲ ಬೀಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.