Select Your Language

Notifications

webdunia
webdunia
webdunia
webdunia

ಹೋಟೆಲ್ ಗೆ 25 ಲಕ್ಷ ಬಿಲ್ ವಂಚಿಸಿ ಬಾತ್ ರೂಂನಿಂದ ಓಡಿ ಹೋದ ಖದೀಮ!

ಹೋಟೆಲ್ ಗೆ 25 ಲಕ್ಷ ಬಿಲ್ ವಂಚಿಸಿ ಬಾತ್ ರೂಂನಿಂದ ಓಡಿ ಹೋದ ಖದೀಮ!
ಮುಂಬೈ , ಗುರುವಾರ, 2 ಸೆಪ್ಟಂಬರ್ 2021 (10:00 IST)
ಮುಂಬೈ: ಸಮಾಜದಲ್ಲಿ ಎಂತೆಂತಾ ವಂಚಕರಿರುತ್ತಾರೆ ನೋಡಿ. ಮುಂಬೈನಲ್ಲಿ ವ್ಯಕ್ತಿಯೊಬ್ಬ ಹೋಟೆಲ್ ಒಂದರ ಎರಡು ಕೊಠಡಿಗಳನ್ನು 8 ತಿಂಗಳ ಕಾಲ ಬಳಸಿ ಬಳಿಕ ಬಿಲ್ ಕೂಡಾ ನೀಡದೇ ಪರಾರಿಯಾದ ಘಟನೆ ನಡೆದಿದೆ.


43 ವರ್ಷದ ವ್ಯಕ್ತಿ ಕಳೆದ 8 ತಿಂಗಳಿನಿಂದ ಹೋಟೆಲ್ ಥ್ರೀ ಸ್ಟಾರ್ ನಲ್ಲಿ ವಾಸ್ತವ್ಯವಿದ್ದ. ಎರಡು ಕೊಠಡಿಗಳನ್ನು ಬಳಸಿದ್ದ ಈತ ಸುಮಾರು 25 ಲಕ್ಷ ರೂ. ಬಿಲ್ ಪಾವತಿಸಬೇಕಿತ್ತು.

ಆದರೆ ಬಿಲ್ ಪಾವತಿ ಮಾಡದೇ ಹೋಟೆಲ್ ನ ಬಾತ್ ರೂಂ ಮೂಲಕ ಎಸ್ಕೇಪ್ ಆಗಿದ್ದಾನೆ. ತಾನು ಸಿನಿಮಾ ಫೀಲ್ಡಿನಲ್ಲಿರುವುದಾಗಿ ಹೇಳಿ ಎರಡು ಡಿಲಕ್ಸ್ ರೂಂ ಬುಕ್ ಮಾಡಿದ್ದ. ಆತನ ಜೊತೆಗೆ ಆತನ ಪುತ್ರನೂ ಇದ್ದ ಎನ್ನಲಾಗಿದೆ. ಇದೀಗ ಇಬ್ಬರೂ ಬಾತ್ ರೂಂ ಮೂಲಕ ಎಸ್ಕೇಪ್ ಆಗಿದ್ದಾರೆ. ಹೋಟೆಲ್ ಮಾಲಿಕರು ಈಗ ಪೊಲೀಸರಿಗೆ ದೂರು ನೀಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಹಾಸನ ಜಿಲ್ಲೆಯಲ್ಲಿ ವಾರಾಂತ್ಯದ ಕರ್ಫ್ಯೂ ಘೋಷಣೆ