Select Your Language

Notifications

webdunia
webdunia
webdunia
webdunia

ಫೋನ್ ಮೂಲಕ ಪತ್ನಿಗೆ ವಿಚ್ಛೇದನ

ಫೋನ್ ಮೂಲಕ ಪತ್ನಿಗೆ ವಿಚ್ಛೇದನ
ಲಕ್ನೋ , ಶನಿವಾರ, 15 ಅಕ್ಟೋಬರ್ 2016 (18:44 IST)
ದೇಶದಾದ್ಯಂತ ಏಕರೂಪ ನಾಗರಿಕ ನೀತಿಸಂಹಿತೆ ಮತ್ತು ವೈಯಕ್ತಿಕ ಕಾನೂನುಗಳ ಸುಧಾರಣೆ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿರುವ ಮಧ್ಯೆ, ವಿದೇಶದಲ್ಲಿರುವ ಉತ್ತರ ಪ್ರದೇಶದ ವ್ಯಕ್ತಿಯೊಬ್ಬ ತನ್ನ ಪತ್ನಿಗೆ ದೂರವಾಣಿ ಕರೆ ಮಾಡಿ ಟ್ರಿಪಲ್ ತಲಾಖ್  ಹೇಳುವ ಮೂಲಕ ವಿಚ್ಛೇದನ ನೀಡಿದ್ದಾನೆ. 
ವರದಿಗಳ ಪ್ರಕಾರ, ಶಹರಾಣಾಪುರ ಜಿಲ್ಲೆಯ ನಿವಾಸಿ ಶಹನವಾಜ್ ಕೆಲ ದಿನಗಳ ಹಿಂದೆ ಪತ್ನಿಗೆ ದೂರವಾಣಿ ಕರೆ ಮಾಡಿ ಮೂರು ಬಾರಿ ತಲಾಖ್ ಹೇಳುವುದರ ಮೂಲಕ ಪತ್ನಿಯೊಂದಿಗಿನ ಸಂಬಂಧವನ್ನು ಕಡಿದುಕೊಂಡಿದ್ದಾನೆ. 
 
ನನ್ನ ಪತಿ ದೂರವಾಣಿ ಕರೆ ಮಾಡಿ ಮಾನಸಿಕವಾಗಿ ಹಿಂಸೆ ನೀಡತೊಡಗಿದರು. ಆದರೆ ಎಲ್ಲವನ್ನು ಸಹಿಸಿಕೊಂಡ ನಾನು ಸಲಾಮ್ ಎಂದೆ, ಆದರೆ ತಕ್ಷಣ ಅವರು ಮೂರು ಬಾರಿ ತಲಾಖ್ ಎಂದರು ಎಂದು ನೊಂದ ಪತ್ನಿ ದೂರಿದ್ದಾಳೆ. 
 
ನಿನ್ನನ್ನು ಮುಕ್ತಳಾಗಿಸಿದ್ದೇನೆ (ತುಝೆ ಆಜಾದ್ ಕರ್ ದಿಯಾ), ಎಂದು ಪತಿ ಹೇಳಿದ್ದಾಗಿ ಆಕೆ ಹೇಳಿದ್ದಾಳೆ. 
 
ಮೂಲತಃ ಮುಝಪ್ಫರ್‌ನಗರದ ಪೀಡಿತೆ ಕಳೆದ ಎರಡು ವರ್ಷಗಳ ಹಿಂದೆ ಶಹನವಾಜ್‌ನನ್ನು ವರಿಸಿದ್ದಳು. ದಂಪತಿಗೆ ಒಂದು ಹೆಣ್ಣುಮಗುವಿದೆ. ಮಗು ಜನಿಸುವವರೆಗೆ ಎಲ್ಲವೂ ಚೆನ್ನಾಗಿತ್ತು, ಬಳಿಕ ಪತಿ ಮತ್ತು ಆತನ ಪೋಷಕರು ನನ್ನನ್ನು ನಿರ್ಲಕ್ಷಿಸಲು ಪ್ರಾರಂಭಿಸಿದರು ಎಂದಾಕೆ ಆರೋಪಿಸಿದ್ದಾಳೆ. 

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ರಾಜೀನಾಮೆಯಂತಹ ಆತುರದ ನಿರ್ಧಾರ ಬೇಡ: ಶ್ರೀನಿವಾಸ್ ಪ್ರಸಾದ್‌ಗೆ ಸಚಿವ ರಮೇಶ್ ಸಲಹೆ