Webdunia - Bharat's app for daily news and videos

Install App

ಚಕ್ಕುಲಿ ತಿಂದು ಪ್ರಾಣವನ್ನೇ ಕಳೆದುಕೊಂಡ ವ್ಯಕ್ತಿ

Krishnaveni K
ಗುರುವಾರ, 1 ಫೆಬ್ರವರಿ 2024 (15:17 IST)
Photo Courtesy: Twitter
ತೆಲಂಗಾಣ: ಪ್ರಪಂಚದಲ್ಲಿ ಎಂತೆಂಥಾ ವಿಚಿತ್ರ ಸಾವು ಬರುತ್ತದೆ ಎನ್ನುವುದಕ್ಕೆ ಈ ಘಟನೆಯೇ ಸಾಕ್ಷಿ. ಚಕ್ಕುಲಿ ತಿನ್ನಲು ಹೋಗಿ ವ್ಯಕ್ತಿಯೊಬ್ಬ ಪ್ರಾಣವನ್ನೇ ಕಳೆದುಕೊಂಡ ಘಟನೆ ತೆಲಂಗಾಣದ ಮಂಚಿರ್ಯಾಲ್ ನಲ್ಲಿ ನಡೆದಿದೆ.

ಸಂಜೆ ಚಹಾ ಜೊತೆ ಕುರುಕಲು ತಿಂಡಿ ತಿನ್ನುವುದು ಬಹುತೇಕರ ಅಭ್ಯಾಸ. ಅದರಂತೆ ರಂಗರಾವ್ ಎನ್ನುವ 65 ವರ್ಷದ ವ್ಯಕ್ತಿ ಚಹಾ ಜೊತೆ ಚಕ್ಕುಲಿ ಸೇವಿಸಿದ್ದಾರೆ. ಆದರೆ ಅದು ಗಂಟಲಲ್ಲಿ ಸಿಕ್ಕಿಹಾಕಿಕೊಂಡು ಉಸಿರುಗಟ್ಟಿದ ಪರಿಣಾಮ ರಂಗರಾವ್ ಕ್ಷಣದಲ್ಲೇ ಸಾವನ್ನಪ್ಪಿದ್ದಾರೆ. ಒಂದು ಚಕ್ಕುಲಿ ಕೂಡಾ ಜೀವಕ್ಕೆ ಎರವಾಗಬಲ್ಲದು ಎಂಬುದಕ್ಕೆ ಇದೇ ಉದಾಹರಣೆ ನೋಡಿ.

ಗಂಟಲಲ್ಲಿ ಚಕ್ಕುಲಿ ಸಿಲುಕಿಕೊಂಡು ರಂಗರಾವ್ ಉಸಿರಾಡಲಾಗದೇ ಒದ್ದಾಡಿದ್ದಾರೆ. ತಕ್ಷಣವೇ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಆದರೆ ಆಸ್ಪತ್ರೆ ಸೇರುವಷ್ಟರಲ್ಲಿ ಅವರು ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಿಸಿದ್ದಾರೆ. ಈ ಸುದ್ದಿ ಕುಟುಂಬಸ್ಥರಿಗೆ ನಿಜಕ್ಕೂ ಶಾಕ್ ನೀಡಿದೆ.

ಮಂಗಳವಾರ ಸಂಜೆ ಈ ಘಟನೆ ನಡೆದಿದೆ. ಎಲ್ಲರ ಜೊತೆ ನಗು ನಗುತ್ತಾ ಮಾತನಾಡುತ್ತಿದ್ದ ವ್ಯಕ್ತಿ ಹೀಗೆ ಏಕಾ ಏಕಿ ಸಾವನ್ನಪ್ಪಿದ್ದು ಎಲ್ಲರಿಗೂ ಆಘಾತವಾಗಿತ್ತು. ಈ ಸಾವಿನ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ್ದಾರೆ. ಚಹಾದ ಜೊತೆ ಚಕ್ಕುಲಿ ಸೇವಿಸಿದಾಗ ಆದ ಎಡವಟ್ಟಿನಿಂದಲೇ ಸಾವು ಸಂಭವಿಸಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ. ಮೃತ ರಂಗರಾವ್ ದಿನಗೂಲಿ ನೌಕರರಾಗಿದ್ದರು.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ವಿಶ್ವವಿಖ್ಯಾತ ಜಂಬೂಸವಾರಿಗೆ ಮೈಸೂರು ಸಜ್ಜು: ಆರನೇ ಬಾರಿ ಅಂಬಾರಿ ಹೊರಲಿರುವ ಅಭಿಮನ್ಯು

ರಾಜ್‌ಘಾಟ್‌ನಲ್ಲಿ ಮಹಾತ್ಮ ಗಾಂಧಿಗೆ, ವಿಜಯ್ ಘಾಟ್‌ನಲ್ಲಿ ಶಾಸ್ತ್ರಿಗೆ ಗೌರವ ನಮನ ಸಲ್ಲಿಸಿದ ಮೋದಿ

ಗಾಯಕ ಜುಬೀನ್ ಗಾರ್ಗ್‌ 13ನೇ ದಿನದ ಕಾರ್ಯದಲ್ಲಿ ಡಿಸಿಎಂ ಡಿಕೆ ಶಿವಕುಮಾರ್ ಭಾಗಿ

RSSನ ಸಮಾನಾರ್ಥ ಪದವೇ ದೇಶಭಕ್ತಿ: ಪ್ರಧಾನಿ ನರೇಂದ್ರ ಮೋದಿ

ನವೆಂಬರ್ ಕ್ರಾಂತಿ ಬಗ್ಗೆ ಸ್ಫೋಟಕ ಹೇಳಿಕೆ ಕೊಟ್ಟ ಸಿಎಂ ಸಿದ್ದರಾಮಯ್ಯ

ಮುಂದಿನ ಸುದ್ದಿ
Show comments