ರಾಜ್ ಕೋಟ್: ಪತ್ನಿಯನ್ನು ಹತ್ಯೆ ಮಾಡಿ ಆಕೆಯ ಮೃತದೇಹವನ್ನು ಮಣ್ಣು ಮಾಡಲು 10 ಕಿ.ಮೀ.ಗಳಷ್ಟು ದೂರ ಸ್ಕೂಟರ್ ನಲ್ಲಿ ಸಾಗಿಸಿದ ಪತಿಯನ್ನು ಗುಜರಾತ್ ನಲ್ಲಿ ಬಂಧಿಸಲಾಗಿದೆ.
ಅಮಿತ್ ಹೆಮ್ನಾನಿ ಎಂಬಾತ ಬಂಧಿತ. ಮನೆಯಲ್ಲಿ ದಂಪತಿ ನಡುವೆ ಕಲಹವೇರ್ಪಟ್ಟಿದ್ದು, ಈ ಭರದಲ್ಲಿ ಪತ್ನಿಯನ್ನು ಆರೋಪಿ ಹತ್ಯೆ ಮಾಡಿದ್ದಾನೆ. ಹಾಡಹಗಲೇ ಸ್ಕೂಟರ್ ನ ಎದುರು ಬದಿ ಮೃತದೇಹವನ್ನು ಇರಿಸಿ ಯಾರಿಗೂ ಗೊತ್ತಾಗದಂತೆ ಮಣ್ಣು ಮಾಡಲು ಹೊರಟಿದ್ದ. ಆದರೆ ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.