Select Your Language

Notifications

webdunia
webdunia
webdunia
webdunia

ಪತ್ನಿಯನ್ನು ಬೆದರಿಸಲು ಅಶ್ಲೀಲ ವಿಡಿಯೋ ರವಾನಿಸಿ ಅರೆಸ್ಟ್ ಆದ ವ್ಯಕ್ತಿ

ಪತ್ನಿಯನ್ನು ಬೆದರಿಸಲು ಅಶ್ಲೀಲ ವಿಡಿಯೋ ರವಾನಿಸಿ ಅರೆಸ್ಟ್ ಆದ ವ್ಯಕ್ತಿ
ಭೋಪಾಲ್ , ಶನಿವಾರ, 19 ಫೆಬ್ರವರಿ 2022 (09:30 IST)
ಭೋಪಾಲ್: ತವರು ಮನೆ ಸೇರಿದ್ದ ಪತ್ನಿಗೆ ಅಶ್ಲೀಲ ವಿಡಿಯೋ ಕಳುಹಿಸಿ ಬೆದರಿಕೆ ಹಾಕುತ್ತಿದ್ದ ವ್ಯಕ್ತಿ ಹಾಗೂ ಆತನಿಗೆ ಸಹಾಯ ಮಾಡಿದ ಸಂಬಂಧಿಕರೊಬ್ಬರನ್ನು ಪೊಲೀಸರು ಭೋಪಾಲ್ ನಲ್ಲಿ ಬಂಧಿಸಿದ್ದಾರೆ.

ಎರಡು ವರ್ಷಗಳ ಹಿಂದೆ ದಂಪತಿಗೆ ಮದುವೆಯಾಗಿತ್ತು. ಆದರೆ ಕೌಟುಂಬಿಕ ಕಲಹದಿಂದಾಗಿ ಪತ್ನಿ ತವರು ಮನೆ ಸೇರಿಕೊಂಡಿದ್ದಳು. ಈ ನಡುವೆ ಪತಿ ಮತ್ತು ಆತನ ಸಹಚರ ಬೇರೆ ಬೇರೆ ಮೊಬೈಲ್ ನಂಬರ್ ಗಳಿಂದ ಪತ್ನಿಯ ಸಹೋದರನಿಗೆ ಅಶ್ಲೀಲ ವಿಡಿಯೋ ರವಾನಿಸಿ ಬೆದರಿಕೆ ಹಾಕುತ್ತಿದ್ದರು.

ಈ ಸಂಬಂಧ ಮಹಿಳೆ ಮತ್ತು ಆಕೆಯ ಸಹೋದರ ಪೊಲೀಸರಿಗೆ ದೂರು ನೀಡಿದ್ದರು. ಅದರಂತೆ ಪೊಲೀಸರು ಆರೋಪಿಗಳನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ನಾದಿನಿಗೆ ಅಶ್ಲೀಲ ವಿಡಿಯೋ ಕಳುಹಿಸಿದ ಬಾವ ಅರೆಸ್ಟ್