Select Your Language

Notifications

webdunia
webdunia
webdunia
webdunia

ಸಾಕು ನಾಯಿಗೂ ಆಧಾರ ಕಾರ್ಡ್

ಸಾಕು ನಾಯಿಗೂ ಆಧಾರ ಕಾರ್ಡ್
ಭಿಂಡ್ , ಶುಕ್ರವಾರ, 3 ಜುಲೈ 2015 (09:48 IST)
ಆಧಾರ್ ಕಾರ್ಡ್‌ಗೆ ಸಂಬಂಧಿಸಿದಂತೆ ನಡೆಯುತ್ತಿರುವ ಆವಾಂತರಗಳು ಒಂದೆರಡಲ್ಲ.ಕೆಲ ತಿಂಗಳುಗಳ ಹಿಂದೆ ಹನುಮಂತ ದೇವರ ಹೆಸರಿನಲ್ಲಿ, ನಾಯಿಯ ಹೆಸರಿನಲ್ಲಿ ಆಧಾರ್ ಕಾರ್ಡ್ ಅಚ್ಚಾಗಿದ್ದ ಸುದ್ದಿ ಪ್ರಕಟವಾಗಿತ್ತು. ಈಗ ಮತ್ತೆ ನಾಯಿಯ ಹೆಸರಿನಲ್ಲಿ ಆಧಾರ್ ಕಾರ್ಡ್‌ನ್ನು ಪಡೆಯಲಾಗಿದೆ. 
 
ಮಧ್ಯಪ್ರದೇಶದ ಭಿಂಡ್ ಜಿಲ್ಲೆಯ ಉಮ್ರಿಯಲ್ಲಿನ ಆಧಾರ್ ಕಾರ್ಡ್ ಕೇಂದ್ರ ನಾಯಿಗೆ ಆಧಾರ್ ಕಾರ್ಡ್ ಕೊಡಿಸುವ ಕೆಲಸಕ್ಕೆ ಕೈ ಹಾಕಿದೆ. ಹೆಸರು ಟಾಮಿ ಸಿಂಗ್, ತಂದೆಯ ಹೆಸರು ಶೇರ್ ಸಿಂಗ್, ಹುಟ್ಟಿದ ದಿನಾಂಕ ನವೆಂಬರ್ 26 2009 ಎಂದು ಕಾರ್ಡ್‌ನಲ್ಲಿ ನಮೂದಿಸಲಾಗಿದ್ದು ನಾಯಿಯ ಭಾವಚಿತ್ರವಿದೆ.
 
'ಆಜಂ ಖಾನ್ ಮೇಲ್ವಿಚಾರಣೆಯ ಆಧಾರ್ ಕಾರ್ಡ್ ಕೇಂದ್ರದಿಂದ ಆಧಾರ್ ಕಾರ್ಡ್ ಪಡೆದುಕೊಳ್ಳುವಲ್ಲಿ ಬಹಳ ಸಮಸ್ಯೆಗಳಾಗುತ್ತಿವೆ. ನಾಯಿ ಸೇರಿದಂತೆ ಜಾನುವಾರುಗಳಿಗೂ ಇಲ್ಲಿ ಆಧಾರ್ ಕಾರ್ಡ್ ನೀಡಲಾಗುತ್ತಿದೆ', ಎಂದು ಕಿತಿ ಗ್ರಾಮದ ವ್ಯಕ್ತಿಯೊಬ್ಬರು ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. 
 
ಆಜಂ ಖಾನ್ ಎನ್ನುವವರು ಈ ಕೇಂದ್ರದ ಮೇಲ್ವಿಚಾರಣೆ ನಡೆಸುತ್ತಿದ್ದು ಅವರನ್ನು ಬಂಧಿಸಿರುವ ಪೊಲೀಸರು  ವಂಚನೆ ದೂರು ದಾಖಲಿಸಿ ವಿಚಾರಣೆ ನಡೆಸುತ್ತಿದ್ದಾರೆ. ಇದು ಕೈ ತಪ್ಪಿನಿಂದ ಆದ ದೋಷವೋ ಅಥವಾ ಉದ್ದೇಶಪೂರ್ವಕವಾಗಿ ಆಗಿರುವುದೋ ಎಂದು ತನಿಖೆಯ ಬಳಿಕವಷ್ಟೇ ಸ್ಪಷ್ಟಗೊಳ್ಳಲಿದೆ ಎಂದು ಪೊಲೀಸರು ತಿಳಿಸಿದ್ದಾರೆ. 
 
ಹರಿಯಾಣ ಸರ್ಕಾರ ನಾಯಿ ಸೇರಿದಂತೆ 3 ಲಕ್ಷ ಜಾನುವಾರುಗಳಿಗೆ ಆಧಾರ್ ಕಾರ್ಡ್ ಕೊಡಿಸುವ ಕುರಿತು ಚಿಂತನೆ ನಡೆಸುತ್ತಿದೆ ಎಂದು ಕೆಲ ದಿನಗಳಿಂದ ಸುದ್ದಿ ಹರಿದಾಡುತ್ತಿದೆ.
 
ಈ ಹಿಂದೆ ಗುಜರಾತ್‌ನಲ್ಲಿ ಸೋನು' ಹೆಸರಿನ ನಾಯಿಗೆ ಆಧಾರ್ ಕಾರ್ಡ್ ನೀಡಲಾಗಿತ್ತು. ನಾಯಿಯ ಹಸ್ತ, ಕಣ್ಣಿನ ಮಾದರಿ ಪಡೆಯಲಾಗಿತ್ತು. ನಾಯಿಗೆ ಆಧಾರ್ ಕಾರ್ಡ್ ನೀಡಿದ್ದ ಕಾರಣ ಸಿಬ್ಬಂದಿ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗಿತ್ತು.

Share this Story:

Follow Webdunia kannada