Select Your Language

Notifications

webdunia
webdunia
webdunia
webdunia

ಪಶ್ಚಿಮ ಬಂಗಾಳದಲ್ಲಿ ಮತ್ತೆ ಮಮತಾ ಬ್ಯಾನರ್ಜಿ ಅಧಿಕಾರದ ಗದ್ದುಗೆಗೆ

ಮಮತಾ ಬ್ಯಾನರ್ಜಿ
ಕೋಲ್ಕತಾ , ಗುರುವಾರ, 19 ಮೇ 2016 (11:05 IST)
ನವದೆಹಲಿ: ಪಶ್ಚಿಮ ಬಂಗಾಳ ರಾಜ್ಯದಲ್ಲಿ ಮತ ಎಣಿಕೆಯ ಪ್ರವೃತ್ತಿಯನ್ನು ಗಮನಿಸಿದರೆ ಮಮತಾ ಬ್ಯಾನರ್ಜಿ ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಗದ್ದುಗೆಗೆ ಏರುವುದು ಖಚಿತವಾಗಿದೆ. ಮಮತಾ ಅವರ ತೃಣಮೂಲ ಕಾಂಗ್ರೆಸ್ ಎಡರಂಗ ಮತ್ತು ಕಾಂಗ್ರೆಸ್ ವಿರುದ್ಧ ಪ್ರಬಲ ಮುನ್ನಡೆ ಸಾಧಿಸಿದೆ.

ಇತ್ತೀಚಿನ ಟ್ರೆಂಡ್ ಪ್ರಕಾರ, ಮಮತಾ ಚುನಾವಣೋತ್ತರ ಸಮೀಕ್ಷೆಗಳ ನಿರೀಕ್ಷೆಗಿಂತ ಹೆಚ್ಚಿನ ಬಹುಮತದೊಂದಿಗೆ ಅಧಿಕಾರದ ಗದ್ದುಗೆಗೆ ಏರಲಿದ್ದಾರೆ. ಚುನಾವಣೆಗೆ ಮುನ್ನ ಶಾರದಾ ಚಿಟ್ ಫಂಡ್ ಹಗರಣ ಮತ್ತು ನಾರದಾ ಕುಟುಕು ಕಾರ್ಯಾಚರಣೆಯಿಂದಾಗ ಮಮತಾಗೆ ಹಿನ್ನಡೆ ಉಂಟಾಗಿತ್ತು. ಕೋಲ್ಕತಾದಲ್ಲಿ ಫ್ಲೈಓವರ್ ಕುಸಿತದಿಂದ 27 ಜನರ ಸಾವು ಕೂಡ ಮಮತಾ ಸಂಕಷ್ಟ ಹೆಚ್ಚಿಸಿತ್ತು.
 
 ವಿವೇಕಾನಂದ ಫ್ಲೈಓವರ್ ಕುಸಿತದ ಕ್ಷೇತ್ರವಾದ ಜೊರಾಸಾಂಕೊದಲ್ಲಿ ಬಿಜೆಪಿ ಅಭ್ಯರ್ಥಿ ಮುನ್ನಡೆ ಸಾಧಿಸಿದ್ದು,  ಬಿಜೆಪಿಯ ಆಕ್ರಮಣಕಾರಿ ಮನೋಭಾವವು ಲಾಭ ತಂದುಕೊಟ್ಟಿದೆ. ಖರಗ್‌ಪುರದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಕೂಡ ಮುನ್ನಡೆ ಸಾಧಿಸಿದ್ದಾರೆ. 
 ಪಶ್ಚಿಮಬಂಗಾಳದಲ್ಲಿ 6 ಹಂತಗಳಲ್ಲಿ ಚುನಾವಣೆ ನಡೆಸಿದ್ದು, 198 ಮಹಿಳೆಯರು ಸೇರಿದಂತೆ 1961 ಅಭ್ಯರ್ಥಿಗಳು ಕಣದಲ್ಲಿದ್ದಾರೆ. 
ತಾಜಾ ಸುದ್ದಿಗಳನ್ನು ಓದಲು ಮೊಬೈಲ್ ಆ್ಯಪ್‌ನ್ನು ಡೌನ್‌ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಕೇರಳ ವಿಧಾನಸಭೆ ಚುನಾವಣೆ ಫಲಿತಾಂಶ ಲೈವ್: ಕ್ಷಣ ಕ್ಷಣದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ