ಸಂವಿಧಾನಕ್ಕೆ ಏನಾದ್ರೂ ಅಪಾಯವಿದ್ರೆ ಅದು ನಿಮ್ಮಿಂದಲೇ ಮಿಸ್ಟರ್ ಮೋದಿ: ಮಲ್ಲಿಕಾರ್ಜುನ ಖರ್ಗೆ

Krishnaveni K
ಬುಧವಾರ, 25 ಜೂನ್ 2025 (18:27 IST)
ನವದೆಹಲಿ: 1975 ರ ತುರ್ತು ಪರಿಸ್ಥಿತಿ ಆಗಿ ಇಂದಿಗೆ 50 ವರ್ಷ ತುಂಬಿದ ಹಿನ್ನಲೆಯಲ್ಲಿ ಮೋದಿ ಸೇರಿದಂತೆ ಬಿಜೆಪಿ ನಾಯಕರು ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತಿರುಗೇಟು ನೀಡಿದ್ದು ಸಂವಿಧಾನಕ್ಕೆ ಏನಾದರೂ ಅಪಾಯವಿದೆ ಎಂದರೆ ಅದು ನಿಮ್ಮಿಂದ ಮಾತ್ರ ಮಿಸ್ಟರ್ ಮೋದಿ ಎಂದಿದ್ದಾರೆ.

ಬಿಜೆಪಿಯ ತುರ್ತು ಪರಿಸ್ಥಿತಿ ಕರಾಳ ದಿನದ ಅಭಿಯಾನಕ್ಕೆ ಪ್ರತಿಯಾಗಿ ಕಾಂಗ್ರೆಸ್ ಇಂದು 11 ವರ್ಷದ ಅಘೋಷಿತ ತುರ್ತು ಪರಿಸ್ಥಿತಿ ಅಭಿಯಾನ ಹಮ್ಮಿಕೊಂಡಿದೆ. ಈ ಹಿನ್ನಲೆಯಲ್ಲಿ ಮಲ್ಲಿಕಾರ್ಜುನ ಖರ್ಗೆ ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

‘ಈವತ್ತಿನ ಸಂಕಷ್ಟದ ಪರಿಸ್ಥಿತಿಗೆ ಮತ್ತು ಸಂವಿಧಾನಕ್ಕೆ ಏನಾದರೂ ಅಪಾಯವಿದೆ ಎಂದಾದರೆ ಅದು ಪ್ರಸ್ತುತ ಅಧಿಕಾರದಲ್ಲಿರುವ ಕೇಂದ್ರ ಸರ್ಕಾರ ಮತ್ತು ಪ್ರಧಾನಿ ನರೇಂದ್ರ ಮೋದಿಯಿಂದ ಮಾತ್ರ. ಈಗ ನಿಮ್ಮ ಅಭಿಪ್ರಾಯ ಮಂಡಿಸುವ ಸ್ವಾತಂತ್ರ್ಯ ನಿಮಗಿದೆಯೇ? ಕೇಂದ್ರ ಸರ್ಕಾರದ ವಿರುದ್ಧ ಮಾತನಾಡುವ ವಿಪಕ್ಷಗಳ ನಾಯಕರನ್ನು, ಜನರನ್ನು ಜೈಲಿಗಟ್ಟಲಾಗುತ್ತದೆ.

ಸಹಿಷ್ಣುತೆ, ಭ್ರಾತೃತ್ವ, ಸ್ವಾತಂತ್ರ್ಯವನ್ನು ಅಳವಡಿಸಿಕೊಳ್ಳದ ಒಂದು ಸರ್ಕಾರ ನಮಗೆ ಪಾಠ ಮಾಡಲು ಬರಬಾರದು. ಸಂವಿಧಾನ ರಚನೆಯಲ್ಲಿ ಇವರ ಕೊಡುಗೆ ಏನೂ ಇಲ್ಲ. ಆದರೆ ಅದೇ ಜನರು ಈಗ ನಾವು ಸಂವಿಧಾನದ ರಕ್ಷಕರು ಎಂದು ಪೋಸ್ ಕೊಡುತ್ತಿದ್ದಾರೆ. ಅಂದಿನ ತುರ್ತು ಪರಿಸ್ಥಿತಿಯಿಂದ ದೇಶ ಯಾವತ್ತೋ ಹೊರಬಂದಿದೆ. ಸ್ವತಃ ಇಂದಿರಾ ಗಾಂಧಿಯವರೇ ತುರ್ತು ಪರಿಸ್ಥಿತಿ ಸಂದರ್ಭದಲ್ಲಿ ಮಾಡಿದ್ದ ಸಾಂವಿಧಾನಿಕ ತಿದ್ದುಪಡಿಗಳನ್ನು ಹಿಂಪಡೆಯಲು ಮೊರಾರ್ಜಿ ದೇಸಾಯಿಯವರಿಗೆ ಬೆಂಬಲ ನೀಡಿದ್ದರು.

ಆದರೆ ಈಗಿನ ಕೇಂದ್ರ ಸರ್ಕಾರ ವಿಪಕ್ಷಗಳು ಆಡಳಿತವಿರುವ ರಾಜ್ಯಗಳ ವಿರುದ್ಧ ಮಲತಾಯಿ ಧೋರಣೆ ಅನುಸರಿಸುತ್ತಿದೆ. ಚುನಾವಣಾ ಆಯೋಗವೂ ಮೋದಿ ಸರ್ಕಾರದ ಕೈಗೊಂಬೆಯಾಗಿದೆ. ಇದಕ್ಕೆ ಮಹಾರಾಷ್ಟ್ರವೇ ಉದಾಹರಣೆಯಾಗಿದೆ. ಬಿಜೆಪಿಯ ತಾಳಕ್ಕೆ ತಕ್ಕಂತೆ ಕುಣಿಯದ ರಾಜ್ಯಪಾಲರುಗಳನ್ನು ವರ್ಗಾವಣೆ ಮಾಡಲಾಗುತ್ತಿದೆ.

ಕೇಂದ್ರ ಸರ್ಕಾರ ಎಲ್ಲಾ ರೀತಿಯಲ್ಲೂ ವಿಫಲವಾಗಿದೆ. ದೇಶದ ಸಂಪತ್ತನ್ನು ಕೆಲವೇ ಉದ್ಯಮಿಗಳ ಕೈಗೆ ಹಂಚಲಾಗಿದೆ. ಬಡವರು ಬಡವರಾಗಿಯೇ ಉಳಿದಿದ್ದಾರೆ. ಶ್ರೀಮಂತರು ಮತ್ತಷ್ಟು ಶ್ರೀಮಂತರಾಗುತ್ತಿದ್ದಾರೆ.

ಮೋದಿ ಹೆಸರಿಗೆ ಮಾತ್ರ ವಿಶ್ವಗುರು. ಆದರೆ ತನ್ನದೇ ದೇಶದ ಸಮಸ್ಯೆಯನ್ನು ಅವರಿಗೆ ನಿಭಾಯಿಸಲು ಸಾಧ್ಯವಾಗುತ್ತಿಲ್ಲ. ಅಮೆರಿಕಾ ಅಧ್ಯಕ್ಷ ಟ್ರಂಪ್ ಗೆ ಹೆದರುವ ಇವರು ವಿಶ್ವ ಗುರು ಹೇಗಾಗುತ್ತಾರೆ? ಎಂದು ಖರ್ಗೆ ಲೇವಡಿ ಮಾಡಿದ್ದಾರೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಮದ್ಯಪಾನ ಪಾರ್ಟಿ ವೇಳೆ ಜಗಳ, ಒಬ್ಬನ ಹತ್ಯೆಯಲ್ಲಿ ಅಂತ್ಯ

ಬಿಜೆಪಿ ರಾಷ್ಟ್ರೀಯ ಕಾರ್ಯಾಧ್ಯಕ್ಷರಾಗಿ ನಿತಿನ್ ನಬಿನ್

ಮೂರು ರಾಷ್ಟ್ರಗಳ ಪ್ರವಾಸ: ಅಮ್ಮಾನ್‌ಗೆ ಆಗಮಿಸಿದ ಪ್ರಧಾನಿ ಮೋದಿ

ದೆಹಲಿ ದಟ್ಟ ಹೊಗೆ, ಮಂಜು: ಇಂದು 40 ವಿಮಾನಗಳು ರದ್ದು

ವಿಳಂಬವಿಲ್ಲ, ನಿರ್ಲಕ್ಷ್ಯವಿಲ್ಲ, ಸಾಬೂಬುಗಳನ್ನು ಹೇಳಲಿಲ್ಲ

ಮುಂದಿನ ಸುದ್ದಿ
Show comments