Select Your Language

Notifications

webdunia
webdunia
webdunia
webdunia

ಮೋದಿ ಸರ್ಕಾರಕ್ಕೆ ಮೂರು ಪ್ರಶ್ನೆ ಮುಂದಿಟ್ಟ ಮಲ್ಲಿಕಾರ್ಜುನ ಖರ್ಗೆ

Mallikarjun Kharge
ನವದೆಹಲಿ: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವರು ಗೃಹ ಬಳಕೆಯ 14.2 ಕೆಜಿ ತೂಕದ ಎಲ್‌ಪಿಜಿ ಸಿಲಿಂಡರ್ ದರ ಏರಿಕೆ ಸಂಬಂಧ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಸಂಬಂಧ ಅವರು ಬರೆದುಕೊಂಡು, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. 

ಕಳೆದ ನಾಲ್ಕು ತಿಂಗಳಲ್ಲಿ ಮೋದಿ ಸರ್ಕಾರವು ಗೃಹ ಬಳಕೆಯ ಎಲ್‌ಪಿಜಿ ಸಿಲಿಂಡರ್‌ಗಳ ಬೆಲೆಯನ್ನು ₹89 ರಷ್ಟು ಹೆಚ್ಚು ಮಾಡಿದೆ. ಈ ವಿಚಾರವಾಗಿ ಕೇಂದ್ರದ ಮುಂದೆ ಖರ್ಗೆ ಮೂರು ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ. 

ಮೊದಲನೆಯದಾಗಿ, 'ಸಂಸತ್ತಿನಲ್ಲಿ ಪಶ್ಚಿಮ ಏಷ್ಯಾ ಯುದ್ಧದಿಂದಾಗಿ 41 ದೇಶಗಳಿಂದ ಇಂಧನ ಪೂರೈಸುವ ಬಗ್ಗೆ ಪ್ರಧಾನಿ ಮೋದಿ ಸಮರ್ಥನೆಯನ್ನು ನೀಡಿದ್ದರು. ಅದೀಗ ಏನಾಯಿತು? ಇಂದಿಗೂ ಗ್ರಾಮೀಣ ಪ್ರದೇಶದಲ್ಲಿ ಎಲ್‌ಪಿಜಿ ಕೊರತೆ ಏಕೆ ಕಾಡುತ್ತಿದೆ?' ಎಂದಿದ್ದಾರೆ.  

'ಎರಡನೇಯದಾಗಿ 2025-26ರಲ್ಲಿ ಉಜ್ವಲ ಯೋಜನೆಯ ಅಡಿಯಲ್ಲಿ 5.56 ಕೋಟಿ ಕುಟುಂಬಗಳು ಒಂದೇ ಒಂದು ಮರುಪೂರಣವನ್ನು ಪಡೆದಿಲ್ಲ. ಈ ಪೈಕಿ ಪಶ್ಚಿಮ ಏಷ್ಯಾ ಬಿಕ್ಕಟ್ಟಿಗೂ ಮುನ್ನವೇ 3.30 ಕೋಟಿ ಕುಟುಂಬಗಳು ಒಂದೇ ಎಂದು ರಿಫಿಲ್ ಲಭ್ಯವಾಗಿಲ್ಲ. ಇದು ಮೋದಿ ಸರ್ಕಾರದ ಲೂಟಿಯಲ್ಲವೇ?'  

'ಕೊನೆಯದಾಗಿ ಪ್ರಧಾನಿ ಮೋದಿ ಹಾಗೂ ಬಿಜೆಪಿ ನಾಯಕರು ಯುಪಿಎ ಅವಧಿಯಲ್ಲಿನ ಹಣದುಬ್ಬದರ ಬಗ್ಗೆ ಗದ್ದಲ ಎಬ್ಬಿಸುತ್ತಿದ್ದರು. ಆದರೆ ಮೋದಿ ಸರ್ಕಾರ ಕಳೆದ 12 ವರ್ಷಗಳಲ್ಲಿ ದೇಶೀಯ ಎಲ್‌ಪಿಜಿ ಬೆಲೆಯನ್ನು ₹530 ಹೆಚ್ಚಿಸಿರುವುದು ನಿಜವಲ್ಲವೇ? ಹೀಗಿರುವಾಗ ಬಿಜೆಪಿ ನಾಯಕರು ಈಗ ಯಾಕೆ ಸಿಲಿಂಡರ್ ಹಿಡಿದುಕೊಂಡು ಬೀದಿಗಿಳಿಯುತ್ತಿಲ್ಲ' ಎಂದು ಪ್ರಶ್ನಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಸಚಿವರಾಗಿ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದ ಹಾಗೇ ಎಂಬಿಬಿಎಸ್ ಪಾಸಾದವರಿಗೆ ಗುಡ್‌ನ್ಯೂಸ್‌ ಕೊಟ್ಟ ಯುಟಿ ಖಾದರ್‌