Select Your Language

Notifications

webdunia
webdunia
webdunia
webdunia

ಮಹಾತ್ಮಾ ಗಾಂಧಿ ಮೊಮ್ಮಗ ವಿಧಿವಶ

ಮಹಾತ್ಮಾ ಗಾಂಧಿ ಮೊಮ್ಮಗ ವಿಧಿವಶ
ಸೂರತ್ , ಮಂಗಳವಾರ, 8 ನವೆಂಬರ್ 2016 (10:57 IST)
ಮಹಾತ್ಮಾ ಗಾಂಧಿ ಮೊಮ್ಮಗ ಹಾಗೂ ನಾಸಾ ನಿವೃತ್ತ ವಿಜ್ಞಾನಿ ಕನು ಗಾಂಧಿ ನಿನ್ನೆ ಸೂರತ್‌ನ ಖಾಸಗಿ ಆಸ್ಪತ್ರೆಯಲ್ಲಿ ಸೋಮವಾರ ಸಂಜೆ ಕೊನೆಯುಸಿರೆಳೆದಿದ್ದಾರೆ. ಅವರ ಸಹಾಯಕ ಇದನ್ನು ಖಚಿತ ಪಡಿಸಿದ್ದಾರೆ.

87 ವರ್ಷದ ಕನು ಗಾಂಧಿ ಪತ್ನಿ ಶಿವಲಕ್ಷ್ಮಿಯನ್ನು ಅಗಲಿದ್ದಾರೆ. 
 
1930 ಮಾರ್ಚ್- ಎಪ್ರಿಲ್ ತಿಂಗಳಲ್ಲಿ ದಂಡಿಯಲ್ಲಿ ನಡೆದ ಐತಿಹಾಸಿಕ ಉಪ್ಪಿನ ಸತ್ಯಾಗ್ರಹದಲ್ಲಿ ಕನು ತಮ್ಮ ತಾತ ಮಹಾತ್ಮಾ ಗಾಂಧಿ ಜತೆ ಓಡಾಡಿಕೊಂಡಿದ್ದರು. ತಾತ ಹಿಡಿದ ಕೋಲಿನ ಒಂದು ತುದಿಯನ್ನು ಅವರು ಹಿಡಿದಿರುವ ಫೋಟೋದಿಂದ ಅವರು ಪ್ರಸಿದ್ಧರಾಗಿದ್ದರು. 
 
ಅಕ್ಟೋಬರ್ 22ರಂದು ಕನುಗಾಂಧಿ ಅವರಿಗೆ ಹೃದಯಾಘಾತ ಮತ್ತು ಮೆದುಳು ರಕ್ತಸ್ರಾವವಾದ ಪರಿಣಾಮ ಅವರ ದೇಹಕ್ಕೆ ಪಾರ್ಶ್ವವಾಯು ಬಡಿದಿತ್ತು. ಕೋಮದಲ್ಲಿದ್ದ ಅವರು ಆ ಬಳಿಕ ಚೇತರಿಸಿಕೊಳ್ಳಲೇ ಇಲ್ಲ ಎಂದು ಅವರ ಆತ್ಮೀಯ ಸ್ನೇಹಿತ ಧೀಮಂತ್ ಬದೀಯಾ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ
 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿಗೆ ಜೀವಬೆದರಿಕೆ: ಅಮೀನಮಟ್ಟು ವಿರುದ್ಧ ಪ್ರಕರಣ ದಾಖಲು