ಮಹಾರಾಷ್ಟ್ರದ ಆಶ್ರಮ ಶಾಲೆಯೊಂದರಲ್ಲಿ ಸಂಪೂರ್ಣ ಶಿಕ್ಷಕ ಸಮುದಾಯವೇ ತಲೆತಗ್ಗಿಸುವಂತಹ ಮಹಾಘೋರ ಕೃತ್ಯ ನಡೆದಿದೆ. 12 ಬುಡಕಟ್ಟು ಬಾಲಕಿಯರ ಮೇಲೆ 10 ಜನ ಶಿಕ್ಷಕರೂ ಸೇರಿದಂತೆ ಶಾಲೆಯ 11 ಕ್ಕೂ ಹೆಚ್ಚು ಸಿಬ್ಬಂದಿ ಸಾಮೂಹಿಕ ಅತ್ಯಾಚಾರವೆಸಗಿದ ಹೇಯ, ಪೈಶಾಚಿಕ, ಖಂಡನೀಯ ಘಟನೆ ನಡೆದಿದ್ದು, ಸಂಪೂರ್ಣ ದೇಶವೇ ಬೆಚ್ಚಿ ಬಿದ್ದಿದೆ.
ಮುಂಬೈನಿಂದ 450ಕೀಲೋಮೀಟರ್ ದೂರದಲ್ಲಿ, ಬುಲ್ಡಾನಾ ಜಿಲ್ಲೆಯ ಹಿವರ್ಖೇಡಾದಲ್ಲಿರುವ ನಿನಾಧಿ ಆಶ್ರಮ ಶಾಲೆಯಲ್ಲಿ ಈ ಕೃತ್ಯ ನಡೆದಿದೆ.
ಆರೋಪಿಗಳಲ್ಲಿ ಶಾಲೆಯ ಮುಖ್ಯ ಶಿಕ್ಷಕ ಕೂಡ ಸೇರಿದ್ದು ಅತ್ಯಾಚಾರಕ್ಕೊಳಗಾದ ಬಾಲಕಿಯರು 12ರಿಂದ 14ರ ವಯಸ್ಸಿನವರೊಳಗಿದ್ದಾರೆ. ಶಾಲಾ ಸಿಬ್ಬಂದಿಯ ಈ ಕೀಚಕ ಕೃತ್ಯದಿಂದ ಕೆಲ ಬಾಲಕಿಯರು ಗರ್ಭಿಣಿಯರಾಗಿದ್ದಾರೆಂದು ತಿಳಿದು ಬಂದಿದೆ.
ಪೀಡಿತ ವಿದ್ಯಾರ್ಥಿಗಳು ದೀಪಾವಳಿ ರಜೆಗೆಂದು ಮನೆಗೆ ಬಂದಾಗ ಅವರ ಮೇಲೆ ನಡೆದಿರುವ ಈ ಘೋರ ಕೃತ್ಯ ಬೆಳಕಿಗೆ ಬಂದಿದೆ.
ಮಹಾರಾಷ್ಟ್ರ ರಾಜ್ಯವನ್ನು ಬೆಚ್ಚಿಬೀಳಿಸಿದ ಈ ಪ್ರಕರಣದ ತನಿಖೆ ನಡೆಸಲು ಹಿರಿಯ ಐಪಿಎಸ್ ಅಧಿಕಾರಿ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಲಾಗಿತ್ತು. 11 ಆರೋಪಿಗಳನ್ನು ನಿನ್ನೆ ತಡರಾತ್ರಿ ಬಂಧಿಸಲಾಗಿದೆ. ಆರೋಪಿಗಳ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ ಎಂದು ಪೊಲೀಸರು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ