Webdunia - Bharat's app for daily news and videos

Install App

ಪ್ರಯಾಗ್‌ನಲ್ಲಿ ಮಹಾಕುಂಭಮೇಳ: ಸಂಕ್ರಾಂತಿಯಂದು ಸಂಗಮದಲ್ಲಿ ಒಂದು ಕೋಟಿ ಭಕ್ತರಿಂದ ಅಮೃತ ಸ್ನಾನ

Sampriya
ಮಂಗಳವಾರ, 14 ಜನವರಿ 2025 (16:29 IST)
Photo Courtesy X
ಪ್ರಯಾಗ್‌ರಾಜ್‌: ವಿಶ್ವದ ಅತಿ ದೊಡ್ಡ ಧಾರ್ಮಿಕ ಉತ್ಸವವಾದ ಮಹಾಕುಂಭಮೇಳಕ್ಕೆ ಪ್ರಯಾಗ್‌ರಾಜ್‌ನಲ್ಲಿ ಸೋಮವಾರ ಅದ್ದೂರಿ ಚಾಲನೆ ಸಿಕ್ಕಿದೆ. ಮಕರ ಸಂಕ್ರಮಣ ದಿನವಾದ ಮಂಗಳವಾರ ಬೆಳಗ್ಗೆ ಕುಂಭಮೇಳದಲ್ಲಿ ಒಂದು ಕೋಟಿ ಭಕ್ತರು ಅಮೃತ ಸ್ನಾನ ಮಾಡಿ ಮಿಂದೆದ್ದಿದ್ದಾರೆ.

ಮುಂಜಾನೆ ಪಂಚಾಯತ್ ನಿರ್ವಾಣಿ ಅಖಾರದ ನಾಗಾ ಸಾಧುಗಳು ಸಂಗಮದಲ್ಲಿ ಪವಿತ್ರ ಸ್ನಾನ ಮಾಡಿದರು. ನಂತರ ಇತರ ಅಖಾಡಗಳ ಋಷಿಗಳು ಪವಿತ್ರ ಸ್ನಾನ ಮಾಡಿದರು.

ಭಾರತ ಮತ್ತು ವಿದೇಶಗಳಿಂದ ಬಂದಿದ್ದ ಲಕ್ಷಾಂತರ ಯಾತ್ರಿಕರು ಚಳಿಯನ್ನು ಲೆಕ್ಕಿಸದೇ, ಅಮೃತ ಸ್ನಾನಕ್ಕಾಗಿ ಗಂಗಾ, ಯಮುನಾ ಮತ್ತು ಸರಸ್ವತಿ ನದಿಗಳ ಸಂಗಮವಾದ ಸಂಗಮಕ್ಕೆ ಆಗಮಿಸಿದರು. ಬ್ರಾಹ್ಮಿ ಮುಹೂರ್ತದಂದು ಅಸಂಖ್ಯಾತ ಭಕ್ತರು ಪವಿತ್ರ ನೀರಿನಲ್ಲಿ ಮುಳುಗಿದರು.

ಪಂಚಾಯತ್ ನಿರ್ವಾಣಿ ಅಖಾಡದ ನಾಗಾ ಸಾಧುಗಳು ಈಟಿ, ತ್ರಿಶೂಲ ಮತ್ತು ಕತ್ತಿಗಳಿಂದ ಅಲಂಕರಿಸಲ್ಪಟ್ಟ ರಾಜ ರೂಪದಲ್ಲಿ ಅಮೃತ ಸ್ನಾನ ಮಾಡಿದರು. ಕುದುರೆಗಳು ಮತ್ತು ರಥಗಳ ಮೇಲೆ ಸವಾರಿ ಮಾಡಿ, ಸಾಧುಗಳು ಮತ್ತು ಸಂತರು ಭವ್ಯ ಮೆರವಣಿಗೆ ಮುನ್ನಡೆಸಿದರು.

ಪ್ರಯಾಗ್‌ರಾಜ್‌ನ ನಾಗವಾಸುಕಿ ದೇವಸ್ಥಾನ ಮತ್ತು ಸಂಗಮ್ ಪ್ರದೇಶದಲ್ಲಿ ಬೆಳಗಿನ ಜಾವದಿಂದಲೇ ಭಕ್ತರು ನೆರೆದಿದ್ದರು. ಸ್ನಾನ ಘಟ್ಟಗಳ 12 ಕಿ.ಮೀ. ವ್ಯಾಪ್ತಿಯಲ್ಲಿ ಹರ ಹರ ಮಹಾದೇವ್ ಮತ್ತು ಜೈ ಶ್ರೀ ರಾಮ್ ಘೋಷಣೆಗಳು ಮೊಳಗಿದವರು.<>

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

Pahalgram: ಸಕಲ ಸರ್ಕಾರಿ ಗೌರವಗಳೊಂದಿಗೆ ಮಂಜುನಾಥ್‌, ಭರತ್ ಭೂಷಣ್‌ಗೆ ಅಂತ್ಯಕ್ರಿಯೆ

Pehlagam ಪ್ರವಾಸಿಗರ ರಕ್ಷಣೆಗೆ ಹೋಗಿ ಜೀವ ಕಳೆದುಕೊಂಡ ಮುಸ್ಲಿಂ ಯುವಕ, ತಂದೆಯ ಮಾತು ಕೇಳಿದ್ರೆ ಮೈ ರೋಮಾಂಚನ

‌Pahalgam Terror Attack:ಸರ್ವಪಕ್ಷ ಸಭೆಗೂ ಮುನ್ನಾ ರಾಷ್ಟ್ರಪತಿಯನ್ನು ಭೇಟಿಯಾದ ಅಮಿತ್ ಶಾ

Pahalgam Terror Attack: ವಾಘಾ ಅಟ್ಟಾರಿ ಗಡಿ ಬಂದ್‌ನಿಂದ ಪಾಕ್‌ನ ಮೇಲೆ ಬೀರುವ ಪರಿಣಾಮಗಳು

ಪಾಕಿಸ್ತಾನ ಗಡಿ ಬಳಿ ಬಂದು ನಿಂತ INS Vikrant: ಈ ಯುದ್ಧ ನೌಕೆಯ ವಿಶೇಷತೆಗಳೇನು ನೋಡಿ

ಮುಂದಿನ ಸುದ್ದಿ
Show comments