Select Your Language

Notifications

webdunia
webdunia
webdunia
webdunia

ಮಧ್ಯಪ್ರದೇಶ್: ಫೇಸ್‌ಬುಕ್‌ನಲ್ಲಿ ನೆಹರುರನ್ನು ಹೊಗಳಿದ್ದಕ್ಕಾಗಿ ಐಎಎಸ್ ಅಧಿಕಾರಿಗೆ ಟ್ರಾನ್ಸಫರ್

ಮಧ್ಯಪ್ರದೇಶ್: ಫೇಸ್‌ಬುಕ್‌ನಲ್ಲಿ ನೆಹರುರನ್ನು ಹೊಗಳಿದ್ದಕ್ಕಾಗಿ ಐಎಎಸ್ ಅಧಿಕಾರಿಗೆ ಟ್ರಾನ್ಸಫರ್
ಭೋಪಾಲ್ , ಶುಕ್ರವಾರ, 27 ಮೇ 2016 (20:18 IST)
ದೇಶದ ಪ್ರಪ್ರಥಮ ಪ್ರಧಾನಿ ಜವಾಹರಲಾಲ್ ನೆಹರು ಅವರನ್ನು ಸಾಮಾಜಿಕ ಅಂತರ್ಜಾಲ ತಾಣವಾದ ಫೇಸ್‌ಬುಕ್‌ನಲ್ಲಿ ವರ್ಣಿಸಿದ ಐಎಎಸ್ ಅಧಿಕಾರಿಯನ್ನು ಮಧ್ಯಪ್ರದೇಶ ಸರಕಾರ ಎತ್ತಂಗಡಿ ಮಾಡಿದೆ. ಮಧ್ಯಪ್ರದೇಶದ ಸರಕಾರದ ಕ್ರಮಕ್ಕೆ ಕಾಂಗ್ರೆಸ್ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ.
 
ಐಎಎಸ್ ಅಧಿಕಾರಿ ಅಜಯ್ ಸಿಂಗ್ ಗಂಗ್ವಾ ಅವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಮಾಡಿರುವುದು ವೈರಲ್ ಆದ  ಮಾರನೇ ದಿನವೇ ಅವರನ್ನು ಮಧ್ಯಪ್ರದೇಶ ಸರಕಾರ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
 
1947ರಿಂದ ನೆಹರು ಯಾವ ಯಾವ ತಪ್ಪುಗಳನ್ನು ಮಾಡಿದ್ದಾರೆ ಎನ್ನುವುದನ್ನು ನಾನು ತಿಳಿಯಲು ಬಯಸುತ್ತೇನೆ. ಹಿಂದೂ ತಾಲಿಬಾನಿ ರಾಷ್ಟ್ರವಾಗುವುದನ್ನು ತಡೆದ ನೆಹರು ಕ್ರಮ ತಪ್ಪೆ? ಐಐಟಿ, ಇಸ್ರೋ, ಬಾರ್ಕ್, ಬಿಎಚ್‌ಇಎಲ್, ಸ್ಟೀಲ್ ಪ್ಲ್ಯಾಂಟ್‌ಗಳು, ಡ್ಯಾಮ್‌ಗಳು ಮತ್ತು ವಿದ್ಯುತ್ ಘಟಕಗಳು ನಿರ್ಮಿಸಿರುವುದು ತಪ್ಪೆ ಎಂದು ಪ್ರಶ್ನಿಸಿದ್ದಾರೆ.
 
ಬಾಬಾ ರಾಮದೇವ್ ಮತ್ತು ಆಸಾರಾಮ್ ಬಾಪುರಂತೆ ದಿಗ್ಗಜರಿಲ್ಲವೆಂದು ವಿಕ್ರಂ ಸಾರಾಭಾಯಿ ಮತ್ತು ಹೋಮಿ ಬಾಬಾರಂತಹ ದಿಗ್ಗಜರನ್ನು ನೆಹರು ಸನ್ಮಾನಿಸಿರುವುದು ತಪ್ಪೆ?ಎಂದು ಪ್ರಶ್ನಿಸಿದ್ದರು.
 
ಮಧ್ಯಪ್ರದೇಶದ ಸರಕಾರದ ಸೇವಾ ನಿಯಮಗಳನ್ನು ಉಲ್ಲಂಘಿಸಿದ್ದಾರೆ ಎಂದು ಸರಕಾರಿ ಮೂಲಗಳು ತಿಳಿಸಿವೆ. ಆದರೆ ಇತ್ತಿಚಿಗಷ್ಟೆ ನೇಮಕಗೊಂಡಿದ್ದ ಅಧಿಕಾರಿಯನ್ನು ಯಾವ ಕಾರಣದಿಂದ ವರ್ಗಾಯಿಸಲಾಗಿದೆ ಎನ್ನುವ ಬಗ್ಗೆ ಸರಕಾರ ಸ್ಪಷ್ಟನೆ ನೀಡಿಲ್ಲ ಎನ್ನಲಾಗಿದೆ.  
 
ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾನ್ ತೋರಿದ ಅಸಹಿಷ್ಠುತೆ ಕ್ರಮಕ್ಕೆ ಮುಂಬರುವ ದಿನಗಳಲ್ಲಿ ತಕ್ಕ ಉತ್ತರ ನೀಡುವುದಾಗಿ ಕಾಂಗ್ರೆಸ್ ಘೋಷಿಸಿದೆ.
 
ಜವಾಹರ್ ಲಾಲ್ ನೆಹರುರಂತಹ ನಾಯಕರನ್ನು ಹೊಗಳಿದ್ದಕ್ಕಾಗಿ ಐಎಎಸ್ ಅಧಿಕಾರಿಗೆ ನೀಡಿರುವ ಶಿಕ್ಷೆ ಮಧ್ಯಪ್ರದೇಶ ಸರಕಾರದ ಹೇಯ ಕೃತ್ಯವಾಗಿದೆ ಎಂದು ಕಾಂಗ್ರೆಸ್ ಮುಖಂಡ ಮೀಮ್ ಅಫ್ಜಲ್ ವಾಗ್ದಾಳಿ ನಡೆಸಿದ್ದಾರೆ. 

 
ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ವಿಧಾನ ಪರಿಷತ್, ರಾಜ್ಯಸಭೆ ಚುನಾವಣೆಗೆ ನಾಳೆ ಅಭ್ಯರ್ಥಿಗಳ ಪಟ್ಟಿ ಪ್ರಕಟ: ಸಿಎಂ