Select Your Language

Notifications

webdunia
webdunia
webdunia
webdunia

ಮಧ್ಯಪ್ರದೇಶ: ವಿಷಕಾರಿ ಮಧ್ಯ ಸೇವಿಸಿ 9 ಮದ್ಯ ಮಂದಿ ಸಾವು

 Madhya Pradesh’s Sagar Liquor Tragedy
Photo Credit X
ಮಧ್ಯಪ್ರದೇಶದ ಸಾಗರ್‌ನಲ್ಲಿ ಕಳಪೆ ಗುಣಮಟ್ಟದ ಅಥವಾ ವಿಷಕಾರಿ ಮದ್ಯ ಸೇವಿಸಿ 9ಮಂದಿ ಸಾವನ್ನಪ್ಪಿರುವ ಧಾರುಣ ಘಟನೆ ನಡೆದಿದೆ. 

ಮೃತಪಟ್ಟವರು ವಿವಿಧ ಹಳ್ಳಿಗಳ ನಿವಾಸಿಗಳಾಗಿದ್ದು, ಶನಿವಾರ ರಾತ್ರಿ ಮದ್ಯ ಸೇವಿಸಿದ ನಂತರ ಅಸ್ವಸ್ಥಗೊಂಡಿದ್ದರು ಎಂದು ವರದಿಯಾಗಿದೆ.

ಪ್ರಾಥಮಿಕ ಮಾಹಿತಿಯ ಪ್ರಕಾರ, ಘೂಘರ್, ನೌರಾಜ್, ಬರಾಜ್ ಮತ್ತು ಸುತ್ತಮುತ್ತಲಿನ ಪ್ರದೇಶಗಳ ಜನರು ಶನಿವಾರ ರಾತ್ರಿ ಮದ್ಯ ಸೇವಿಸಿದ್ದರು.

ಮದ್ಯ ಸೇವಿಸಿದ ಕೆಲವೇ ಹೊತ್ತಿನಲ್ಲಿ ಅವರ ಆರೋಗ್ಯ ಸ್ಥಿತಿ ಹದಗೆಟ್ಟಿತು; ತಕ್ಷಣವೇ ಕುಟುಂಬದವರು ಅವರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ಕರೆದೊಯ್ದರು.

ಆದರೆ, ಆಸ್ಪತ್ರೆಯ ವೈದ್ಯರು ಅವರು ಮೃತಪಟ್ಟಿರುವುದಾಗಿ ಘೋಷಿಸಿದರು.

ಈ ಸಾವಿಗೆ ವಿಷಕಾರಿ ಮದ್ಯವೇ ಕಾರಣವಿರಬಹುದು ಎಂದು ಶಂಕಿಸಲಾಗಿದ್ದರೂ, ಮದ್ಯದ ವಿಷಪೂರಿತ ಪರಿಣಾಮದಿಂದಲೇ ಸಾವು ಸಂಭವಿಸಿದೆ ಎಂದು ಅಧಿಕಾರಿಗಳು ಇನ್ನೂ ಅಧಿಕೃತವಾಗಿ ದೃಢಪಡಿಸಿಲ್ಲ.

ಮರಣೋತ್ತರ ಪರೀಕ್ಷೆಯ ನಂತರ ಸಾವಿಗೆ ನಿಖರವಾದ ಕಾರಣವೇನೆಂಬುದು ತಿಳಿಯಲಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Share this Story:

Follow Webdunia kannada

ಮುಂದಿನ ಸುದ್ದಿ

ಪರಂದೂರು ಯೋಜನೆ ರದ್ದು ಬೆನ್ನಲ್ಲೇ ವಿಜಯ್ ತಮಿಳು ಸರ್ಕಾರ 2 ಸ್ಥಳಗಳ ಅಂತಿಮ