Select Your Language

Notifications

webdunia
webdunia
webdunia
webdunia

13 ನೂತನ ಸ್ಮಾರ್ಟ್ ಸಿಟಿಗಳ ಪಟ್ಟಿ ಘೋಷಣೆ: ವೆಂಕಯ್ಯನಾಯ್ಡು

13 ನೂತನ ಸ್ಮಾರ್ಟ್ ಸಿಟಿಗಳ ಪಟ್ಟಿ ಘೋಷಣೆ: ವೆಂಕಯ್ಯನಾಯ್ಡು
ನವದೆಹಲಿ , ಮಂಗಳವಾರ, 24 ಮೇ 2016 (16:29 IST)
ಕೇಂದ್ರ ಸರಕಾರ ಸ್ಮಾರ್ಟ್ ಸಿಟಿ ಮಿಷನ್ ಯೋಜನೆಯಡಿ ಅಂಗವಾಗಿ ಹೆಚ್ಚುವರಿಯಾಗಿ ದೇಶದ 13 ಸಿಟಿಗಳನ್ನು ಸ್ಮಾರ್ಟ್ ಸಿಟಿಗಳಾಗಿ ಅಭಿವೃದ್ಧಿಪಡಿಸುವುದಾಗಿ ಘೋಷಿಸಿದೆ. ಉತ್ತರಪ್ರದೇಶದ ಲಕ್ನೋ, ತೆಲಂಗಾಂಣಾದ ವಾರಂಗಲ್ ಮತ್ತು ಹಿಮಾಚಲ್ ಪ್ರದೇಶದ ಧರ್ಮಶಾಲಾ ನಗರಗಳು ಸೇರಿವೆ ಎಂದು ತಿಳಿಸಿದೆ.  
 
ಕಳೆದ ಜನೆವರಿ ತಿಂಗಳ ಮೊದಲ ಸುತ್ತಿನ ಸ್ಮಾರ್ಟ್ ಸಿಟಿಗಳ ಪಟ್ಟಿಯಲ್ಲಿ 23 ರಾಜ್ಯಗಳು ಸೇರ್ಪಡೆಗೊಳ್ಳುವಲ್ಲಿ ವಿಫಲವಾಗಿದ್ದವು. ಆದ್ದರಿಂದ, ಎರಡನೇ ಬಾರಿದೆ ಸ್ಮಾರ್ಟ್ ಸಿಟಿ ಪಟ್ಟಿಯನ್ನು ಘೋಷಿಸಲಾಗಿದೆ ಎಂದು ನಗರಾಭಿವೃದ್ಧಿ ಸಚಿವ ಎಂ.ವೆಂಕಯ್ಯನಾಯ್ಡು ತಿಳಿಸಿದ್ದಾರೆ. 
 
23 ನಗರಗಳಲ್ಲಿ 13 ನಗರಗಳು ಮಾತ್ರ ಸ್ಮಾರ್ಟ್ ಸಿಟಿ ಯೋಜನೆಯಡಿಯಲ್ಲಿ ಅರ್ಹತೆ ಪಡೆದಿವೆ ಎಂದು ನಾಯ್ಡು ಮಾಹಿತಿ ನೀಡಿದ್ದಾರೆ.
 
ಈ ಬಾರಿಯ ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ ಚಂಡೀಗಢ್, ರಾಯ್ಪುರ್(ಚತ್ತೀಸ್‌ಗಢ್), ನ್ಯೂಟೌನ್ ಕೋಲ್ಕತಾ, ಭಾಗಲ್ಪುರ್(ಬಿಹಾರ್), ಪಣಜಿ(ಗೋವಾ), ಪೋರ್ಟ್ ಬ್ಲೇರ್( ಅಂಡಮಾನ್ ಮತ್ತು ನಿಕೋಬಾರ್ ದ್ವೀಪ), ಇಂಫಾಲ್ (ಮಣಿಪುರ್), ರಾಂಚಿ(ಜಾರ್ಖಂಡ್), ಅಗರ್ತಲಾ(ತ್ರಿಪುರಾ) ಮತ್ತು ಫರಿದಾಬಾದ್(ಹರಿಯಾಣಾ). 
 
ಫಾಸ್ಟ್ ಟ್ರ್ಯಾಕ್ ಸ್ಪರ್ಧೆಯಲ್ಲಿ 13 ನಗರಗಳನ್ನು ಆಯ್ಕೆ ಮಾಡಲಾಗಿದ್ದು, 30,229 ಕೋಟಿ ರೂಪಾಯಿಗಳ ಹೂಡಿಕೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಒಟ್ಟು 33 ಸ್ಮಾರ್ಟ್ ಸಿಟಿಗಳ ಅಭಿವೃದ್ಧಿಗಾಗಿ 80,789 ಕೋಟಿ ರೂಪಾಯಿಗಳ ಹಣ ನಿಗದಿಪಡಿಸಲಾಗಿದೆ ಎಂದು ತಿಳಿಸಿದ್ದಾರೆ.
 
ಏಳು ರಾಜಧಾನಿಗಳು ಸ್ಮಾರ್ಟ್ ಸಿಟಿ ಪಟ್ಟಿಯಲ್ಲಿ- ಪಾಟ್ನಾ(ಬಿಹಾರ್), ಶಿಮ್ಲಾ(ಹಿಮಾಚಲ ಪ್ರದೇಶ), ನಯಾ ರಾಯ್ಪುರ್(ಚತ್ತೀಸ್‌ಗಢ್)ಇಟಾನಗರ್ (ಅರುಣಾಚಲ್ ಪ್ರದೇಶ) ಅಮರಾವತಿ(ಆಂಧ್ರಪ್ರದೇಶ), ಬೆಂಗಳೂರು(ಕರ್ನಾಟಕ) ಮತ್ತು ತಿರುವನಂತಪುರಂ (ಕೇರಳ) ನಗರಗಳನ್ನು 100 ಸ್ಮಾರ್ಟ್ ಸಿಟಿ ಪಟ್ಟಿಗಳಲ್ಲಿ ಸೇರ್ಪಡೆಗೊಳಿಸಿಲ್ಲ. ಮುಂದಿನ ಸುತ್ತಿನಲ್ಲಿ ಸೇರ್ಪಡೆಗೊಳಿಸಲಾಗುವುದು ಎಂದು ಕೇಂದ್ರ ನಗರಾಭಿವೃದ್ಧಿ ಖಾತೆ ಸಚಿವ ಎಂ.ವೆಂಕಯ್ಯ ನಾಯ್ಡು ತಿಳಿಸಿದ್ದಾರೆ.

ವೆಬ್‌ದುನಿಯಾ ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.

Share this Story:

Follow Webdunia kannada

ಮುಂದಿನ ಸುದ್ದಿ

ದಲಿತ ಮಹಿಳೆ ಮುಂದಿಟ್ಟುಕೊಂಡು ಕುಮಾರಸ್ವಾಮಿ ರಾಜಕೀಯ: ಸಿದ್ದರಾಮಯ್ಯ