Publish Date: Mon, 20 Mar 2017 (18:17 IST)
Updated Date: Mon, 20 Mar 2017 (18:25 IST)
ಲೋಕಸಭಾ ಚುನಾವಣೆಯಲ್ಲಿ ಉತ್ತರಪ್ರದೇಶದಲ್ಲಿ ಬಿಜೆಪಿ ಪರ, ಬಿಹಾರದ ವಿಧಾನಸಭಾ ಚುನಾವಣೆಯಲ್ಲಿ ನಿತೀಶ್ ಕುಮಾರ್ ಪರ ಚುನಾವಣಾ ತಂತ್ರಗಾರಿಕೆ ರೂಪಿಸಿ ಗೆದ್ದಿದ್ದ ಪ್ರಶಾಂತ್ ಕಿಶೋರ್ ಉತ್ತರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದಾರೆ. ಕಾಂಗ್ರೆಸ್ ಮತ್ತು ಎಸ್ಪಿ ಪರ ಪ್ರಶಾಂತ್ ಈ ಬಾರಿ ತತಂತ್ರಗಾರಿಕೆ ರೂಪಿಸಿದ್ದರು. ಆದರೆ, ಇಲ್ಲಿ ಪ್ರಶಾಂತ್ ಗೇಮ್ ಪ್ಲಾನ್ ವರ್ಕೌಟ್ ಆಗಿಲ್ಲ. ಕಾಂಗ್ರೆಸ್ ಹೀನಾಯ ಸೋಲಿನ ಬಳಿಕ ಪ್ರಶಾಂತ್ ಸಂಪರ್ಕಕ್ಕೆ ಸಿಗುತ್ತಿಲ್ಲವಂತೆ.
ಹೀಗಾಗಿ, ಉತ್ತರಪ್ರದೇಶದ ಬಲ್ಲಿಯಾ ಜಿಲ್ಲೆಯ ಕಾಂಗ್ರೆಸ್ ಕಚೇರಿ ಮುಂದೆ ಒಂದು ಬ್ಯಾನರ್ ನೇತು ಹಾಕಲಾಗಿದ್ದು, ಪ್ರಶಾಂತ್ ಕಿಶೋರ್ ಹುಡುಕಿ ಕೊಟಟ್ವರಿಗೆ 5 ಲಕ್ಷ ಬಹುಮಾನ ನೀಡಲಾಗುವುದೆಂದು ಬರೆಯಲಾಗಿದೆ. ಸ್ಥಳೀಯ ಕಾಂಗ್ರೆಸ್ ನಾಯಕರೇ ಈ ಬ್ಯಾನರ್ ಹಾಕಿಸಿದ್ದಾರೆ ಎಂದು ಹೇಳಲಾಗಿದೆ.
ಇದೀಗ, ಪ್ರದೇಶ ಕಾಂಗ್ರೆಸ್ ಸಮಿತಿ ಈ ಬ್ಯಾನರ್ ತೆಗೆಯುವಂತೆ ಕಾರ್ಯಕರ್ತರಿಗೆ ಸೂಚಿಸಿದೆ.