ಪುದುಚೇರಿಯ ನೂತನ ಉಪರಾಜ್ಯಪಾಲ ಕಿರಣ್ ಬೇಡಿ ವಿಐಪಿ ಕಾರ್ ಸೈರನ್ ಬಳಕೆಗೆ ತಡೆ ಒಡ್ಡಿದ್ದಾರೆ. ರಾಜ ನಿವಾಸದ ಬೆಂಗಾವಲು ಮತ್ತು ಪೈಲಟ್ ವಾಹನಗಳಿಗೂ ಇದು ಅನ್ವಯಿಸಲಿದೆ.
ಅಂಬುಲೆನ್ಸ್ ಮತ್ತು ಅಗ್ನಿಶಾಮಕ ವಾಹನಗಳಂತಹ ತುರ್ತು ಸೇವೆ ವಾಹನಗಳಿಗೆ ಈ ನಿರ್ಬಂಧ ಅನ್ವಯಿಸುವುದಿಲ್ಲ ಎಂದು ರಾಜ್ಯಪಾಲರ ಕಾರ್ಯದರ್ಶಿ ಥೇವಾ ನಿಧಿ ದಾಸ್ ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ಉಲ್ಲೇಖಿಸಲಾಗಿದೆ.
ಅಷ್ಟೇ ಅಲ್ಲದೆ ವಿವಿಐಪಿ ಕಾರ್‌ಗಳಿಗೆ ಟ್ರಾಫಿಕ್ ನಿಲುಗಡೆಯಂತಹ ವಿಶೇಷ ಸವಲತ್ತುಗಳನ್ನು ಸಹ ನೀಡಲಾಗದು ಎಂದು ಬೇಡಿ ಹೇಳಿದ್ದಾರೆ.
ಪ್ರಯಾಣಿಕರಿಗೆ ಯಾವುದೇ ಅನಾನುಕೂಲತೆಯಾಗದ ಹಾಗೆ ಟ್ರಾಫಿಕ್ ನಿರ್ವಹಣೆಗಾಗಿ ಸಾಕಷ್ಟು ಸಂಖ್ಯೆಯ ಸಿಬ್ಬಂದಿ ಇರುವದನ್ನು ಖಚಿತ ಪಡಿಸಿಕೊಳ್ಳಲು ರಾಜ್ಯಪಾಲರು ನಿರ್ದೇಶಿಸಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.