ಯುವತಿ ತನ್ನ ತಂದೆ, ತಾಯಿಯನ್ನು ಧಿಕ್ಕರಿಸಿ ಜಗಸೀರ್ ಎಂಬ ಯುವಕನಲ್ಲಿ ಅನುರಕ್ತನಾಗಿದ್ದಳು. ಜಗಸೀರ್ ಬೇರೆ ಜಾತಿಗೆ ಸೇರಿದ್ದು, ಕುಟುಂಬ ಈ ಪ್ರೇಮವನ್ನು ವಿರೋಧಿಸಿದ ಹಿನ್ನೆಲೆಯಲ್ಲಿ ಈ ಕೃತ್ಯ ನಡೆದಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಯುವತಿಯ ಗೆಳೆಯ ಅವಳ ಸಾವಿನ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಕೂಡಲೇ ಎಚ್ಚೆತ್ತ ಪೊಲೀಸರು ಚಿತಾಗಾರಕ್ಕೆ ಧಾವಿಸಿ, ಉರಿಯುತ್ತಿದ್ದ ಚಿತೆಯನ್ನು ಆರಿಸಿದರು. ಯುವತಿಯ ಹತ್ಯೆಕೋರರ ಪತ್ತೆಗೆ ಸಾಕ್ಷ್ಯಗಳ ಸುಳಿವಿಗಾಗಿ ಅವರು ಚಿತೆಯನ್ನು ಆರಿಸಿದ್ದರು.
ಗ್ರಾಮವೊಂದರಲ್ಲಿ ಯುವತಿಯೊಬ್ಬಳನ್ನು ಅವಳ ಕುಟುಂಬದವರೇ ಹತ್ಯೆ ಮಾಡಿ ಆತುರಾತುರವಾಗಿ ಅಂತ್ಯಕ್ರಿಯೆ ನಡೆಸಲು ಪ್ರಯತ್ನಿಸಿದ ಘಟನೆ ನಡೆದಿದೆ. ಇದೊಂದು ಮರ್ಯಾದೆ ಹತ್ಯೆಯ ನಿದರ್ಶನವೆಂದು ಹೇಳಲಾಗುತ್ತಿದೆ. ಯುವತಿ ಅನ್ಯ ಜಾತಿಯ ಯುವಕನನ್ನು ಪ್ರೀತಿಸಿದ್ದರಿಂದ ತಮ್ಮ ಕುಟುಂಬದ ಮರ್ಯಾದೆ ಬೀದಿಪಾಲಾಗಿದೆಯೆಂದು ಮನೆಯ ಮಗಳನ್ನೇ ಸಾವಿನ ಕೂಪಕ್ಕೆ ತಳ್ಳಿದ್ದಾರೆಂದು ಯುವತಿಯ ಗೆಳೆಯ ಪೊಲೀಸರಿಗೆ ದೂರು ನೀಡಿದ್ದಾನೆ.
ಆದರೆ ಯುವತಿ ಜಗಸೀರ್‌ನನ್ನೇ ವರಿಸುವುದಾಗಿ ಪಟ್ಟುಹಿಡಿದಿದ್ದರಿಂದ ಆಕ್ರೋಶಗೊಂಡ ಕುಟುಂಬ ಯುವತಿಯನ್ನು ಹತ್ಯೆ ಮಾಡಿರುವುದಾಗಿ ಜಗಸೀರ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾನೆ. ಯುವತಿ ಹರ್ಜೀಂದರ್ ಕೌರ್ ದೇಹವನ್ನು ಸೂರ್ಯಾಸ್ತದ ನಂತರ ಚಿತಾಗಾರದಲ್ಲಿ ಸುಡಲಾಗಿತ್ತು. ಆದರೆ ಇದು ಸಂಪ್ರದಾಯಕ್ಕೆ ವಿರುದ್ಧವಾಗಿದ್ದರಿಂದ ಜಗಸೀರ್ ಅವಳ ಸಾವಿನ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದ. ಪೊಲೀಸರು ಕುಟುಂಬದವರ ವಿರುದ್ಧ ಮರ್ಯಾದೆ ಹತ್ಯೆಯನ್ನು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.