Select Your Language

Notifications

webdunia
webdunia
webdunia
webdunia

ಮಹಿಳೆಯ ಮೇಲೆ ಗ್ಯಾಂಗ್‌ರೇಪ್ ಎಸಗಿ 40 ಸಾವಿರ ರೂ.ಗಳಿಗೆ ಮಾರಾಟ

ಮಹಿಳೆಯ ಮೇಲೆ ಗ್ಯಾಂಗ್‌ರೇಪ್ ಎಸಗಿ 40 ಸಾವಿರ ರೂ.ಗಳಿಗೆ ಮಾರಾಟ
ಕಾನ್ಪುರ್ , ಮಂಗಳವಾರ, 18 ಅಕ್ಟೋಬರ್ 2016 (15:01 IST)
ಕಾಣೆಯಾದ ಸಂಬಂಧಿಗಳ ಹುಡುಕಾಟ ನಡೆಸಿದ್ದ ಮಹಿಳೆಗೆ ಸಂಬಂಧಿಕರನ್ನು ತೋರಿಸುವ ಆಮಿಷವೊಡ್ಡಿ ಆಕೆಯ ಮೇಲೆ ಇಬ್ಬರು ಆರೋಪಿಗಳು ಅತ್ಯಾಚಾರವೆಸಗಿದ್ದಲ್ಲದೇ ಮಾರಾಟ ಮಾಡಿದ ಹೇಯ ಘಟನೆ ವರದಿಯಾಗಿದೆ.
 
ಕಳೆದ ಒಂದು ತಿಂಗಳ ಹಿಂದೆ ಬಿಹಾರ್ ಮೂಲದವಳಾದ ಮಹಿಳೆ ಶಿಮ್ಲಾಗೆ ತೆರಳುವ ರೈಲಿನಲ್ಲಿ ತನ್ನ ಚಿಕ್ಕಪ್ಪ ಮತ್ತು ಚಿಕ್ಕಮ್ಮ ಅವರೊಂದಿಗೆ ಪ್ರಯಾಣಿಸುತ್ತಿದ್ದಳು. ಆದರೆ, ರೈಲು ಇಟವಾ ರೈಲ್ವೆ ನಿಲ್ದಾಣ ತಲುಪಿದಾಗ ಪರಸ್ಪರರು ಬೇರೇ ಬೇರೆಯಾಗಿದ್ದಾರೆ.
 
ಸಂಬಂಧಿಕರಿಗಾಗಿ ಹುಡುಕಾಟ ನಡೆಸುತ್ತಿದ್ದ ಮಹಿಳೆಯನ್ನು ಸಂಪರ್ಕಿಸಿದ ವ್ಯಕ್ತಿಯೊಬ್ಬ ಸಂಬಂಧಿಕರನ್ನು ತೋರಿಸುವುದಾಗಿ ನಂಬಿಸಿ ಫೂಲ್‌ಸಿಂಗ್ ಎಂಬಾತನ ನಿವಾಸಕ್ಕೆ ಕರೆದುಕೊಂಡು ಹೋಗಿದ್ದಾನೆ. ಫೂಲ್‌ಸಿಂಗ್ ಎನ್ನುವ ಆರೋಪಿ ಮಹಿಳೆಯನ್ನು ಅವಧೇಶ್ ಜಾಧವ್ ಎಂಬಾತನಿಗೆ 40 ಸಾವಿರ ರೂಪಾಯಿಗಳಿಗೆ ಮಾರಾಟ ಮಾಡಿದ್ದಾನೆ.
 
ಕೆಲ ದಿನಗಳ ನಂತರ ಗ್ರಾಮದಲ್ಲಿ ಕೆಲಸಕ್ಕೆಂದು ತೆರಳುತ್ತಿದ್ದಾಗ ಅರವಿಂದ್ ಮತ್ತು ವಿಶ್ರಾಮ್ ಎನ್ನುವ ಆರೋಪಿಗಳು ಆಕೆಯನ್ನು ಅಪಹರಿಸಿ ನಿರ್ಜನ ಪ್ರದೇಶಕ್ಕೆ ಕರೆದುಕೊಂಡು ಹೋಗಿ ಅತ್ಯಾಚಾರವೆಸಗಿದ್ದಾರೆ. ಆರೋಪಿಗಳ ಕಪಿಮುಷ್ಠಿಯಿಂದ ತಪ್ಪಿಸಿಕೊಂಡ ಮಹಿಳೆ ಪೊಲೀಸ್ ಠಾಣೆಗೆ ತೆರಳಿ ಆರೋಪಿಗಳ ವಿರುದ್ಧ ದೂರು ನೀಡಿದ್ದಾಳೆ
 
ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳಉಹಿಸಲಾಗಿದ್ದು, ನಾಪತ್ತೆಯಾಗಿರುವ ಆರೋಪಿಗಳ ಬಂಧನಕ್ಕಾಗಿ ಜಾಲ ಬೀಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಸಂತೋಷ್ ಕುಮಾರ್ ಅವಸ್ಥಿ ತಿಳಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ 

Share this Story:

Follow Webdunia kannada

ಮುಂದಿನ ಸುದ್ದಿ

ಸೀಮಿತ ದಾಳಿಯಿಂದ ಭಾರತೀಯ ಸೇನೆಯ ಪ್ರತಿಷ್ಠೆ ಹೆಚ್ಚಾಗಿದೆ: ಪ್ರಧಾನಿ ಮೋದಿ