Select Your Language

Notifications

webdunia
webdunia
webdunia
webdunia

ಹತ್ತಿರದಲ್ಲಿ ಯಾವ ಎಟಿಎಂನಲ್ಲಿ ಹಣ ಬರುತ್ತಿದೆ ತಿಳಿಯಬೇಕೆ?

cash
ನವದೆಹಲಿ , ಮಂಗಳವಾರ, 15 ನವೆಂಬರ್ 2016 (14:09 IST)
ಪ್ರಧಾನಿ ಮೋದಿ ಹಳೆಯ 500 ಮತ್ತು 1,000ರೂಪಾಯಿ ಮುಖಬೆಲೆ ನೋಟುಗಳನ್ನು ನಿಷೇಧಿಸಿದಾಗಿನಿಂದ ದೇಶಾದ್ಯಂತ ಜನರು ಹಣಕ್ಕಾಗಿ ಪರದಾಡುತ್ತಿದ್ದಾರೆ. ಕೆಲ ಎಟಿಎಮ್‌ಗಳ ಮುಂದೆ ಕೀಲೋಮೀಟರ್‌ಗಳಟ್ಟಲೆ ಸರತಿ ಸಾಲಿದ್ದರೆ ಹಲವು ಎಟಿಎಂ‌ಗಳ ಶಟರ್ ಎಳೆದಿಡಲಾಗಿದೆ. ಹಣ ಹಾಕಿದ್ದಷ್ಟೇ ವೇಗದಲ್ಲಿ ಹಣವೂ ಖಾಲಿಯಾಗುತ್ತಿದೆ. ಸದ್ಯ ಎಲ್ಲರ ತಲೆಯಲ್ಲಿ ಓಡಾಡುವ ಪ್ರಶ್ನೆ ಹತ್ತಿರದಲ್ಲಿ ವರ್ಕಿಂಗ್ ಎಟಿಎಂ ಎಲ್ಲಿದೆ ಎಂಬುದು? 

ಜನರ ಈ ಪರದಾಟಕ್ಕೆ ಆದಷ್ಟು ಕೊನೆ ಹಾಡಲು ಭಾರತದ ಅತಿದೊಡ್ಡ ನಗದು ನಿರ್ವಹಣೆ ಮತ್ತು ಪಾವತಿ ಪರಿಹಾರಗಳು ಸಂಸ್ಥೆ ಮತ್ತು ಜಗತ್ತಿನ ನಾಲ್ಕನೇ ಎಟಿಎಂ ನಗದು ನಿರ್ವಹಣೆ ಕಂಪನಿ ಎಂದು ತನ್ನನ್ನು ತಾನು ಕರೆಸಿಕೊಳ್ಳುವ ಸಿಎಮ್ಎಸ್ ಮುಂದಾಗಿದೆ. 
 
ನಿಮಗೆ ಹತ್ತಿರದಲ್ಲಿ ಕಾರ್ಯನಿರ್ವಹಿಸುತ್ತಿರುವ ಎಟಿಎಂನ್ನು ಪತ್ತೆ ಹಚ್ಚಲು, ಕಂಪನಿ 'ಸಿಎಮ್ಎಸ್ ಎಟಿಎಂ ಫೈಂಡರ್'( CMS ATM Finder ) ನ್ನು ಪರಿಚಯಿಸಿದೆ. ಇದು ಹತ್ತಿರದ ಎಟಿಎಂ ಇತ್ತೀಚಿನ ಸ್ಟೇಟಸ್ ಏನೆಂಬುದನ್ನು ತೋರಿಸುತ್ತದೆ. ಕಳೆದ ರಾತ್ರಿಯಿಂದ ಇಲ್ಲಿಯವರೆಗೆ 2 ಲಕ್ಷಕ್ಕಿಂತಲೂ ಹೆಚ್ಚು ಈ ಸೇವೆಯನ್ನು ಬಳಸಿದ್ದಾರೆ ಎಂದು ಕಂಪನಿ ಹೇಳಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ಮೋದಿ ಯಾರಿಗಾಗಿ ಕಣ್ಣೀರು ಸುರಿಸಿದ್ದಾರೆ: ಪೂಜಾರಿ ಕಿಡಿ