Select Your Language

Notifications

webdunia
webdunia
webdunia
webdunia

ಅಯೋಧ್ಯೆ ರಾಮಮಂದಿರ ಉದ್ಘಾಟನೆಗೆ ಬರಲಿದ್ದಾರೆ ಎಲ್ ಕೆ ಅಡ್ವಾಣಿ

LK Advani

Krishnaveni K

ನವದೆಹಲಿ , ಗುರುವಾರ, 11 ಜನವರಿ 2024 (10:18 IST)
ನವದೆಹಲಿ: ಅಯೋಧ‍್ಯೆಯಲ್ಲಿ ರಾಮಮಂದಿರ ಲೋಕಾರ್ಪಣೆಯಾಗುವ ಐತಿಹಾಸಿಕ ಕ್ಷಣದಲ್ಲಿ ಬಿಜೆಪಿ ಮುತ್ಸುದ್ದಿ ಎಲ್.ಕೆ ಅಡ್ವಾಣಿ ಭಾಗಿಯಾಗಲಿದ್ದಾರೆ.

ಇದಕ್ಕೆ ಮೊದಲು ಆರೋಗ್ಯದ ದೃಷ್ಟಿಯಿಂದ ಅಡ್ವಾಣಿ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲ್ಲ ಎಂಬ ಸುದ್ದಿಗಳಿತ್ತು. ಆದರೆ ಅಡ್ವಾಣಿಯವರ ಬಹು ವರ್ಷಗಳ ಕನಸು ಇದಾಗಿದ್ದು, ಈ ಸಂದರ್ಭದಲ್ಲಿ ಅವರು ಹಾಜರಿರುವುದು ಕನ್ ಫರ್ಮ್ ಆಗಿದೆ.

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಹೋರಾಟದ ಪ್ರಮುಖ ರೂವಾರಿಗಳು ಎಲ್ ಕೆ ಅಡ್ವಾಣಿ ಮತ್ತು ಮುರಳಿ ಮನೋಹರ್ ಜೋಶಿ. ಇವರಿಬ್ಬರಿಗೂ ಆಹ್ವಾನ ನೀಡಲಾಗಿತ್ತಾದರೂ ಆರೋಗ್ಯದ ದೃಷ್ಟಿಯಿಂದ ಬರುವುದು ಬೇಡ ಎಂದು ರಾಮಮಂದಿರ ಟ್ರಸ್ಟ್ ಮನವಿ ಮಾಡಿತ್ತು ಎಂಬ ಸುದ್ದಿಗಳು ಈ ಹಿಂದೆ ಸಾಕಷ್ಟು ಚರ್ಚೆಗೆ ಗ್ರಾಸವಾಗಿತ್ತು. ಆದರೆ ಇದೀಗ ಅಡ್ವಾಣಿ ಸ್ವತಃ ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗುವ ಇಂಗಿತ ವ್ಯಕ್ತಪಡಿಸಿದ್ದಾರೆ.

ಹೀಗಾಗಿ ಅವರಿಗಾಗಿ ಪ್ರತ್ಯೇಕ ವೈದ್ಯಕೀಯ ತಂಡವನ್ನು ನಿಯೋಜಿಸಲಾಗುತ್ತದೆ. ಜನವರಿ 22 ರಂದು ನಡೆಯಲಿರುವ ಲೋಕಾರ್ಪಣೆ ಕಾರ್ಯಕ್ರಮದಲ್ಲಿ ಅವರು ಭಾಗಿಯಾಗುವುದು ಖಚಿತವಾಗಿದೆ.

Share this Story:

Follow Webdunia kannada

ಮುಂದಿನ ಸುದ್ದಿ

ರೀಲ್ಸ್‌ ಮಾಡಲು ಬಿಡದ ಪತಿಯನ್ನು ಕೊಂದು ನೇತು ಹಾಕಿದ ಪತ್ನಿ!