Select Your Language

Notifications

webdunia
webdunia
webdunia
Tuesday, 8 April 2025
webdunia

ಜನರೇ ಆಯ್ಕೆ ಮಾಡಲಿ : ನಂಬರ್ ಕೊಟ್ಟ ಕೇಜ್ರಿವಾಲ್

ಚುನಾವಣೆ
ಚಂಡೀಗಢ , ಗುರುವಾರ, 13 ಜನವರಿ 2022 (14:56 IST)
ಚಂಡೀಗಢ : ರಾಜ್ಯದಲ್ಲಿ ಮುಂಬರುವ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷದ(ಎಎಪಿ) ಸಿಎಂ ಅಭ್ಯರ್ಥಿಯನ್ನು ಪಂಜಾಬ್ನ ಜನರು ನಿರ್ಧರಿಸುತ್ತಾರೆ ಎಂದು ಪಕ್ಷದ ರಾಷ್ಟ್ರೀಯ ಸಂಚಾಲಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ತಿಳಿಸಿದರು.
 
ಪಂಜಾಬ್ ನಲ್ಲಿ ಮುಂದಿನ ಸಿಎಂ ಅಭ್ಯರ್ಥಿ ಯಾರು ಎಂಬ ಮಾಧ್ಯಮ ಪ್ರಶ್ನೆಗೆ ಉತ್ತರಿಸಿದ ಅವರು, ಎಎಪಿ ಮುಂದಿನ ಸಿಎಂ ಅಭ್ಯರ್ಥಿಯನ್ನು ಜನರೇ ಆಯ್ಕೆ ಮಾಡುತ್ತಾರೆ.

ಈ ಬಗ್ಗೆ ಜನರು ಮುಕ್ತವಾಗಿ ತಮ್ಮ ಅಭಿಪ್ರಾಯವನ್ನು ತಿಳಿಸಬಹುದು. ಜನರಿಗಾಗಿಯೇ ಮೊಬೈಲ್ ನಂಬರ್ ಅನ್ನು ಬಿಡುಗಡೆ ಮಾಡಲಾಗುತ್ತೆ. ಆ ಮೂಲಕ ಜನರು ತಮ್ಮ ಅಭಿಪ್ರಾಯವನ್ನು ನೇರವಾಗಿ ತಿಳಿಸಬಹುದು ಎಂದು ನಂಬರ್ ಬಿಡುಗಡೆ ಮಾಡಿದರು.

ಈ ವೇಳೆ ಕೇಜ್ರಿವಾಲ್ ಅವರು 70748 70748 ನಂಬರ್ ಅನ್ನು ಬಿಡುಗಡೆ ಮಾಡಿದ್ದು, ಈ ನಂಬರ್ ಗೆ ಜನರು ಕರೆ ಮಾಡಿ ಜನವರಿ 17 ಸಂಜೆ 5 ಗಂಟೆಯವರೆಗೆ ತಮ್ಮ ಅಭಿಪ್ರಾಯವನ್ನು ತಿಳಿಸಬಹುದು. ಜನರು ಮುಕ್ತವಾಗಿ ಕರೆ ಮಾಡಿ ತಮ್ಮ ಸಲಹೆಗಳನ್ನು ನೀಡಬಹುದು ಎಂದು ತಿಳಿಸಿದರು.

Share this Story:

Follow Webdunia kannada

ಮುಂದಿನ ಸುದ್ದಿ

ಕೋವಿಡ್ ಹೆಚ್ಚಲು ಪಾದಯಾತ್ರೆಯೂ ಕಾರಣ: ಸುಧಾಕರ್