Select Your Language

Notifications

webdunia
webdunia
webdunia
webdunia

ಶೀಘ್ರದಲ್ಲಿಯೇ ಬೇನಾಮಿ ಆಸ್ತಿದಾರರ ವಿರುದ್ಧ ಕಠಿಣ ಕ್ರಮ: ಪ್ರಧಾನಿ ಮೋದಿ ವಾರ್ನಿಂಗ್

ಶೀಘ್ರದಲ್ಲಿಯೇ ಬೇನಾಮಿ ಆಸ್ತಿದಾರರ ವಿರುದ್ಧ ಕಠಿಣ ಕ್ರಮ: ಪ್ರಧಾನಿ ಮೋದಿ ವಾರ್ನಿಂಗ್
ನವದೆಹಲಿ , ಭಾನುವಾರ, 25 ಡಿಸೆಂಬರ್ 2016 (15:12 IST)
ನೋಟು ನಿಷೇಧ ಜಾರಿಗೊಳಿಸಿದ ನಂತರ ಭ್ರಷ್ಟಾಚಾರ ಮತ್ತು ಕಪ್ಪು ಹಣದ ವಿರುದ್ಧ ಸಮರ ಮುಂದುವರಿಸಿರುವ ಪ್ರಧಾನಿ ಮೋದಿ, ಶೀಘ್ರದಲ್ಲಿಯೇ ಬೇನಾಮಿ ಆಸ್ತಿ ಹೊಂದಿದವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ. 
 
ಮನ್ ಕಿ ಬಾತ್‌ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನೋಟು ನಿಷೇಧ ಜಾರಿಗೊಳಿಸಿದ ನಂತರ ಸರದಿಯಲ್ಲಿ ನಿಯಮಗಳನ್ನು ಬದಲಾಯಿಸಿರುವುದನ್ನು ಸಮರ್ಥಿಸಿಕೊಂಡ ಅವರು ಜನತೆಯ ಸಮಸ್ಯೆಗಳನ್ನು ಕಡಿಮೆ ಮಾಡಲು ಕೆಲ ಕ್ರಮಗಳನ್ನು ತೆಗೆದುಕೊಳ್ಳಲಾಯಿತು ಎಂದು ತಿಳಿಸಿದ್ದಾರೆ.
 
ಭ್ರಷ್ಟಾಚಾರದ ವಿರುದ್ಧದ ಸಮರದಲ್ಲಿ ಸಾರ್ವಜನಿಕರು ಕೈಜೋಡಿಸಿದಾಗ ಕಾರ್ಯಾಚರಣೆ ಯಶಸ್ವಿಯಾಗುತ್ತದೆ. ಸಾಮಾನ್ಯ ಜನರು ನೀಡಿದ ಮಾಹಿತಿಯ ಮೇರೆಗೆ ದೊಡ್ಡ ದೊಡ್ಡ ಕಪ್ಪು ಹಣದ ಕುಳಗಳನ್ನು ಬಂಧಿಸಿ ಕೋಟ್ಯಾಂತರ ರೂಪಾಯಿ ವಶಕ್ಕೆ ಪಡೆಯಲಾಗಿದೆ ಎಂದರು.
 
ಭ್ರಷ್ಟಾಚಾರ ವಿರುದ್ಧದ ಹೋರಾಟ ಅಂತ್ಯವಲ್ಲ ಆರಂಭ.. ಭ್ರಷ್ಟಾಚಾರಿಗಳು ಮತ್ತು ಕಪ್ಪು ಹಣ ಹೊಂದಿದವರ ವಿರುದ್ಧ ಹೋರಾಟ ನಿರಂತರವಾಗಲಿದೆ ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

1ಕೋಟಿಗಾಗಿ ಮಗುವನ್ನು ಅಪಹರಿಸಿ, ಕೊಂದು ತುಂಡು ತುಂಡಾಗಿಸಿದ ಬಾಲಕರು