Select Your Language

Notifications

webdunia
webdunia
webdunia
webdunia

ಲಷ್ಕರ್ ಕಮಾಂಡರ್ ಜುನೈದ್ ಮಟ್ಟು ಸೇರಿ ಮೂರು ಉಗ್ರರು ಎನ್ ಕೌಂಟರ್ ಗೆ ಬಲಿ

ಲಷ್ಕರ್ ಕಮಾಂಡರ್ ಜುನೈದ್ ಮಟ್ಟು ಸೇರಿ ಮೂರು ಉಗ್ರರು ಎನ್ ಕೌಂಟರ್ ಗೆ ಬಲಿ
ಶ್ರೀನಗರ , ಶುಕ್ರವಾರ, 16 ಜೂನ್ 2017 (16:27 IST)
ಶ್ರೀನಗರ:ಜಮ್ಮು ಮತ್ತು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯಲ್ಲಿ ಪೊಲೀಸರು ಮತ್ತು ಭಾರತೀಯ ಸೇನೆ  ನಡೆಸಿದ ಜಂಟಿಯಾಗಿ ಕಾರ್ಯಾಚರಣೆಯಲ್ಲಿ ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಯ ಕಮಾಂಡರ್ ಜುನೈದ್ ಮಟ್ಟು ಸೇರಿದಂತೆ ಮೂವರು ಉಗ್ರರನ್ನು ಹತ್ಯೆಗೈಯ್ಯಲಾಗಿದೆ.
 
ಅನಂತನಾಗ್ ಜಿಲ್ಲೆಯ ಅರ್ವಾನಿ ಗ್ರಾಮದಲ್ಲಿ ಜುನೈದ್ ಮಟ್ಟು ಅಡಗಿದ್ದಾನೆ ಎಂಬ ಖಚಿತ ಮಾಹಿತಿ ಮೇರೆಗೆ ಭಾರತೀಯ ಸೇನೆ ಯೋಧರು ಬೆಳಗ್ಗೆ ಕಾರ್ಯಾಚರಣೆ ಕೈಗೊಂಡಿದ್ದರು. ಈ ಕಾರ್ಯಾಚರಣೆಯಲ್ಲಿ ಜುನೈದ್ ಮಟ್ಟು ಸೇರಿದಂತೆ ಮೂವರು ಉಗ್ರರನ್ನು ಸೇನೆ ಹೊಡೆದುರುಳಿಸಿದೆ. 
 
ಜುನೈದ್ ಮಟ್ಟು ಕಳೆದ ಎರಡು ವರ್ಷಗಳಿಂದ ಲಷ್ಕರ್ ಪರ ಕೆಲಸ ಮಾಡುತ್ತಿದ್ದು ಆತನ ತಲೆಗೆ 10 ಲಕ್ಷ ರು. ಬಹುಮಾನ ಘೋಷಿಸಲಾಗಿತ್ತು.  ಸೇನೆ ಮತ್ತು ಪೊಲೀಸರು ಕಾರ್ಯಾಚರಣೆ ಮುಂದುವರೆಸಿದ್ದಾರೆ. 
 

Share this Story:

Follow Webdunia kannada

ಮುಂದಿನ ಸುದ್ದಿ

ಬ್ಯಾಂಕ್ ಖಾತೆಗಳಿಗೆ ಆಧಾರ್ ಕಾರ್ಡ್ ಕಡ್ಡಾಯ: ಇಲ್ಲದಿದ್ರೆ ಅಕೌಂಟ್ ರದ್ದು