Publish Date: Mon, 12 Jun 2017 (11:56 IST)
Updated Date: Mon, 12 Jun 2017 (11:58 IST)
ಪಾಟ್ನಾ: ಆರ್ ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾದವ್ ಪತ್ನಿ ರಾಬ್ಡೀ ದೇವಿ ತಮ್ಮ ಪುತ್ರ ರತ್ನರಿಬ್ಬರಿಗೆ ಮದುವೆ ಮಾಡಿಸಲು ಹೊರಟಿದ್ದಾರೆ. ಆದರೆ ಅವರಿಗೆ ಎಂತಹ ಹುಡುಗಿ ಬೇಕು ಎನ್ನುವುದರ ಪಟ್ಟಿ ಮಾಡಿದ್ದಾರೆ ನೋಡಿ.
ತೇಜ್ ಪ್ರತಾಪ್ ಯಾದವ್ ಮತ್ತು ತೇಜಸ್ವಿ ಪ್ರತಾಪ್ ಯಾದವ್ ಲಾಲೂ ಪತ್ರರು. ಕೆಲ ದಿನಗಳ ಹಿಂದೆ ಅಕ್ರಮ ಆಸ್ತಿ ಪ್ರಕರಣದಲ್ಲಿ ಇವರ ಹೆಸರು ಕೇಳಿಬಂದಿತ್ತು. ಇದೀಗ ಅಮ್ಮನಿಗೆ ತನ್ನ ಪುತ್ರ ರತ್ನರಿಗೆ ಕನ್ಯೆ ಹುಡುಕುವಾಸೆ.
ಆದರೆ ತನ್ನ ಮಕ್ಕಳಿಗೆ ಮಾಲ್, ಸಿನಿಮಾ ಎಂದೆಲ್ಲಾ ಸುತ್ತಾಡುವ ಹುಡುಗಿಯರು ಬೇಡ. ಸಂಪ್ರದಾಯಸ್ಥ ಹುಡುಗಿ ಬೇಕು ಎಂದು ಘೋಷಿಸಿದ್ದಾರೆ ರಾಬ್ಡೀ ದೇವಿ. ಅದರಲ್ಲೂ ವಿಶೇಷವಾಗಿ ತೇಜ್ ಪ್ರತಾಪ್ ತುಂಬಾ ಸಂಪ್ರದಾಯಗಳನ್ನು ಪಾಲಿಸುವವರಂತೆ. ಹಾಗಾಗಿ ಪಕ್ಕಾ ದೇಸೀ ಹುಡುಗಿ ಬೇಕು ಎಂದು ಲಾಲೂ ಪ್ರಸಾದ್ 70 ನೇ ಹುಟ್ಟುಹಬ್ಬದ ಸಂದರ್ಭದಲ್ಲಿ ಮನದಾಸೆ ಹಂಚಿಕೊಂಡಿದ್ದಾರೆ.