Publish Date: Mon, 01 Jun 2020 (10:31 IST)
Updated Date: Mon, 01 Jun 2020 (10:33 IST)
ನವದೆಹಲಿ : ಕೊರೊನಾ ಭೀತಿಯ ನಡುವೆ ಲಾಕ್ ಡೌನ್ ಸಡಿಲಿಕೆ ಮಾಡಿದ ಸರ್ಕಾರ ಇದೀಗ ಎಲ್ ಪಿಜಿ ಸಿಲಿಂಡರ್ ಬೆಲೆ ಏರಿಕೆ ಮಾಡುವುದರ ಮೂಲಕ ಗ್ರಾಹಕರಿಗೆ ಶಾಕ್ ನೀಡಿದೆ.
ದೆಹಲಿಯಲ್ಲಿ ಸಬ್ಸಿಡಿ ರಹಿತ ಅಡುಗೆ ಅನಿಲದ ಬೆಲೆ 11.50 ರೂಪಾಯಿಗೆ ಏರಿಕೆಯಾಗಿದೆ. ಅಂತರಾಷ್ಟ್ರೀಯ ಮಟ್ಟದಲ್ಲಿ ಎಲ್ ಪಿಜಿ ಬೆಲೆ ಹಾಗೂ ಅಮೇರಿಕ ಡಾಲರ್ ಮತ್ತು ಭಾರತೀಯ ರುಪೀ ಮೌಲ್ಯಗಳನ್ನು ಆಧರಿಸಿ ಈ ಬೆಲೆ ನಿರ್ಧಾರ ಮಾಡಲಾಗುತ್ತದೆ.
ಅಂತರಾಷ್ಟ್ರೀಯ ಮಟ್ಟದಲ್ಲಿ ಎಲ್ ಪಿಜಿ ದರ ಏರಿಕೆ ಕಂಡ ಹಿನ್ನಲೆಯಲ್ಲಿ ಸಿಲಿಂಡರ್ ಗೆ 11 ರೂಪಾಯಿ ಏರಿಕೆಯಾಗದೆ ಎನ್ನಲಾಗಿದೆ.