ನವದೆಹಲಿ : ಕೊರೊನಾ ಸೋಂಕಿನಿಂದ ಭಯಗೊಂಡಿರುವ ಜನ ಯಾವುದೇ ಜ್ವರ ಬಂದ ಕೂಡಲೇ ಡೋಲಾ 650 ಮಾತ್ರೆಯನ್ನು ಪಡೆಯುತ್ತಿದ್ದಾರೆ.
ಪರಿಣಾಮ ದೇಶದಲ್ಲಿ ಕೊರೊನಾ ಕಾಲದಲ್ಲಿ ಡೋಲಾ 650 ಮಾತ್ರೆಯು ದಾಖಲೆಯ ಮಟ್ಟದಲ್ಲಿ ಮಾರಾಟವಾಗಿದೆ. ಎರಡೇ ವರ್ಷದಲ್ಲಿ ಭಾರತದಲ್ಲಿ 358 ಕೋಟಿ ಡೋಲಾ 650 ಮಾತ್ರೆ ಮಾರಾಟವಾಗಿದೆ. 2020ರ ಬಳಿಕ ಭಾರತದಲ್ಲಿ ಏಕಾಏಕಿ ಜ್ವರ ವಿರುದ್ಧ ಔಷಧವಾದ ಡೋಲಾ 650 ಮಾತ್ರೆಗಳು ಬರೋಬ್ಬರಿ 350 ಕೋಟಿಗೂ ಹೆಚ್ಚು ಮಾರಾಟ ಆಗಿವೆ ಎಂದು ಅಂಕಿಅಂಶಗಳು ಹೇಳುತ್ತಿವೆ.
ಭಾರತವು 3.5 ಕೋಟಿಗೂ ಹೆಚ್ಚು ಪ್ರಕರಣಗಳನ್ನು ದಾಖಲಾಗಿವೆ. ಡೋಲೋ 2021ರಲ್ಲಿ 307 ಕೋಟಿ ರೂಪಾಯಿಗಳ ವಹಿವಾಟು ನಡೆಸುವ ಮೂಲಕ ಭಾರತದಲ್ಲಿ ಎರಡನೇ ಅತಿ ಹೆಚ್ಚು ಮಾರಾಟವಾದ ನೋವು ನಿವಾರಕ ಟ್ಯಾಬ್ಲೆಟ್ ಆಗಿದೆ.
ಔಷಧದ ವಾರ್ಷಿಕ ಮಾರಾಟವು 9.4 ಕೋಟಿ ಸ್ಟ್ರಿಪ್ಗಳಿಗೆ ಏರಿಕೆಯಾಯಿತು. ಒಂದು ಸ್ಟ್ರಿಪ್ನಲ್ಲಿ 15 ಮಾತ್ರೆಗಳು ಇರುತ್ತವೆ. 141 ಕೋಟಿ ಮಾತ್ರೆಗಳು ಮಾರಾಟವಾಗಿವೆ. 2020ರಲ್ಲಿ 2019 ಕ್ಕಿಂತ ಎರಡು ಪಟ್ಟು ಹೆಚ್ಚಿನ ಡೋಲಾ 650 ಮಾತ್ರೆಗಳು ಮಾರಾಟವಾಗಿವೆ.
ನವೆಂಬರ್ 2021ರ ವೇಳೆಗೆ 14.5 ಸ್ಟ್ರಿಪ್ಸ್ಗಳು ಮಾರಾಟವಾಗಿವೆ. 217 ಕೋಟಿ ಟ್ಯಾಬ್ಲೆಟ್ಗಳು ಮಾರಾಟವಾದವು. 2020 ಹಾಗೂ 2021ರಲ್ಲಿ ಡೋಲಾ 650ಮಾತ್ರೆಗಳು ಬರೋಬ್ಪರಿ 358 ಕೋಟಿ ಟ್ಯಾಬ್ಲೆಟ್ಗಳು ಮಾರಾಟವಾಗಿತ್ತು.