ಕೋಲ್ಕತ್ತಾ ವೈದ್ಯೆ ಹಂತಕನಿಗೆ ಜೈಲಲ್ಲಿ ರೋಟಿ ಕೊಟ್ರೆ ಸಾಲಲ್ವಂತೆ: ಊಟಕ್ಕಾಗಿ ಡಿಮ್ಯಾಂಡ್ ನೋಡಿ

Krishnaveni K
ಶನಿವಾರ, 31 ಆಗಸ್ಟ್ 2024 (13:47 IST)
ಕೋಲ್ಕತ್ತಾ: ಆರ್ ಜಿ ಕರ್ ಆಸ್ಪತ್ರೆಯಲ್ಲಿ ಟ್ರೈನಿ ವೈದ್ಯೆಯ ಮೇಲೆ ರೇಪ್ ಆಂಡ್ ಮರ್ಡರ್ ಆರೋಪದಲ್ಲಿ ಬಂಧಿತನಾಗಿರುವ ಆರೋಪಿ ಸಂಜಯ್ ರಾಯ್ ಜೈಲಲ್ಲಿ ಊಟಕ್ಕಾಗಿ ಮಾಡುತ್ತಿರುವ ಡಿಮ್ಯಾಂಡ್ ಎಂತಹದ್ದು ನೋಡಿ.

ಕೋಲ್ಕತ್ತಾ ವೈದ್ಯೆ ಹತ್ಯೆ ಆರೋಪಿಯನ್ನು ನ್ಯಾಯಾಲಯ 14 ದಿನಗಳ ನ್ಯಾಯಾಂಗ ಬಂಧನಕ್ಕೆ ನೀಡಿದೆ. ಹೀಗಾಗಿ ಈತ ಸದ್ಯಕ್ಕೆ ಪ್ರೆಸಿಡೆನ್ಷಿಯಲ್ ಕರೆಕ್ಷನ್ ಹೋಂ ಕೇಂದ್ರ ಕಾರಾಗೃಹದಲ್ಲಿದ್ದಾನೆ. ಈತ ಈಗ ಊಟದ ವಿಚಾರದಲ್ಲಿ ಜೈಲು ಸಿಬ್ಬಂದಿ ಜೊತೆ ಸದಾ ಕಿರಿಕ್ ಮಾಡುತ್ತಿದ್ದಾನೆ ಎಂದು ತಿಳಿದುಬಂದಿದೆ.

ಈ ಜೈಲಿನಲ್ಲಿ ಖೈದಿಗಳಿಗೆ ರೋಟಿ ಸಬ್ಜಿ ನೀಡಲಾಗುತ್ತಿದೆ. ಆದರೆ ಈ ಪಾಪಿಗೆ ಅದು ನೀಡಿದರೂ ಸಾಲದಂತೆ ಪ್ರತಿನಿತ್ಯ ರೋಟಿ ಸಬ್ಜಿ ನೀಡುತ್ತಿರುವುದಕ್ಕೆ ಈತ ಕ್ಯಾತೆ ತೆಗೆದಿದ್ದಾನೆ. ಜೈಲು ಸಿಬ್ಬಂದಿಗಳ ಜೊತೆ ಊಟದ ವಿಚಾರಕ್ಕೆ ಕಿತ್ತಾಡಿದ್ದಾನೆ ಎಂದು ತಿಳಿದುಬಂದಿದೆ. ಅಷ್ಟಕ್ಕೂ ಆತನ ಡಿಮ್ಯಾಂಡ್ ಏನು ಗೊತ್ತಾ?

ನನಗೆ ಪ್ರತಿನಿತ್ಯ ರೋಟಿ ಸಬ್ಜಿ ನೀಡಬೇಡಿ, ನನಗೆ ಮೊಟ್ಟೆ ನೀಡಿ ಎಂದು ಆತ ಬೇಡಿಕೆಯಿಟ್ಟಿದ್ದಾನೆ. ಈತನ ಕ್ಯಾತೆ ನೋಡಿ ಸಿಟ್ಟಿಗೆದ್ದ ಜೈಲು ಸಿಬ್ಬಂದಿ ಎಚ್ಚರಿಕೆ ನೀಡಿದ ಬಳಿಕ ಮರು ಮಾತಿಲ್ಲದೇ ರೋಟಿ ತಿಂದಿದ್ದಾನೆ ಎಂದು ತಿಳಿದುಬಂದಿದೆ. ದೇಶವೇ ಆಕ್ರೋಶಗೊಳ್ಳುವಂತೆ ಮಾಡಿದ ಪ್ರಕರಣದಲ್ಲಿ ಬಂಧಿಯಾಗಿರುವ ಈತನ ಧಿಮಾಕಿಗೆ ಜೈಲು ಅಧಿಕಾರಿಗಳೇ ರೊಚ್ಚಿಗೆದ್ದಿದ್ದಾರಂತೆ.

ಸಂಬಂಧಿಸಿದ ಸುದ್ದಿ

ಓದಲೇಬೇಕು

ಮಚ್ಚು ಹಿಡಿದು ರೀಲ್ಸ್‌: ರಜತ್‌ನನ್ನು ಮತ್ತೇ ಪೊಲೀಸ್ ಅರೆಸ್ಟ್ ಮಾಡಿದ್ಯಾಕೆ, ಇಲ್ಲಿದೆ ಕಾರಣ

Preity Zinta: ಚಾಹಲ್ ನಾಲ್ಕು ವಿಕೆಟ್ ಪಡೆದಿದ್ದಕ್ಕೂ ಸಾರ್ಥಕವಾಯಿತು, Troll

7 ವರ್ಷಗಳ ಬಳಿಕ ಮತ್ತೇ ನನ್ನನ್ನೇ ಯಾಕೆ ಪ್ರಶ್ನಿಸುತ್ತಿದ್ದಾರೆ ಎಂದು ಅರ್ಥವಾಗುತ್ತಿಲ್ಲ: ರಾಬರ್ಟ್‌ ವಾದ್ರಾ

Sonu Gowda: ದಿಢೀರನೇ ರೀಲ್ಸ್ ಮಾಡಿ ಕ್ಷಮಕೋರಿದ ಬಿಗ್‌ಬಾಸ್‌ ಸ್ಪರ್ಧಿ, ಕೆಟ್ಟ ಮೇಲೆ ಬುದ್ಧಿ ಬಂತಾ ಎಂದ ನೆಟ್ಟಿಗರು

ಲಕ್ಷ್ಮೀ ನಿವಾಸ ಸೀರಿಯಲ್ ನಟನ ಮನೆಗೆ ಗಂಡು ಮಗುವಿನ ಆಗಮನ

ಎಲ್ಲವನ್ನೂ ನೋಡು

ತಾಜಾ

ಅಕ್ರಮ ಹಣ ವರ್ಗಾವಣೆ ಪ್ರಕರಣ: ಶಾಸಕ ಸತೀಶ್ ಸೈಲ್‌ಗೆ ಮತ್ತೇ ಜೈಲೇ ಗತಿ

ಕೇಂದ್ರದಿಂದಾಗುವ ಪರಿಹಾರಕ್ಕೆ ರಾಜ್ಯ ಸರ್ಕಾರವನ್ನು ಒತ್ತಾಯಿಸಿದ್ರೆ ಹೇಗೆ

ಕೆಎಸ್‌ಆರ್‌ಟಿಸಿ ಬಸ್‌ನಲ್ಲಿ ಬಾಲಕಿ ಟೀ ಶರ್ಟ್‌ ಒಳಗಡೆ ಕೈ ಹಾಕಿ ವ್ಯಕ್ತಿಯಿಂದ ವಿಕೃತಿ, video

ಮನೆ ಬಿಟ್ಟು ಹೋದ ಪತ್ನಿ, ಮಗಳನ್ನು ಕೊಂದು, ವ್ಯಕ್ತಿ ಮಾಡಿದ್ದೇನು ಗೊತ್ತಾ

ರೈತನ ಕೊಂದು ತೊಡೆ, ತಲೆ ಭಾಗ ತಿಂದು ಹಾಕಿದ ಹುಲಿ, ಮೈಸೂರಿನಲ್ಲಿ ವ್ಯಾಘ್ರ ದಾಳಿಗೆ ಮೂರು ಬಲಿ

ಮುಂದಿನ ಸುದ್ದಿ
Show comments