Select Your Language

Notifications

webdunia
webdunia
webdunia
webdunia

ಅರುಣ್ ಜೇಟ್ಲಿ ಅಸಮರ್ಥ ಹಣಕಾಸು ಸಚಿವ: ಬಿಜೆಪಿ ಸಂಸದ

ಅರುಣ್ ಜೇಟ್ಲಿ ಅಸಮರ್ಥ ಹಣಕಾಸು ಸಚಿವ: ಬಿಜೆಪಿ ಸಂಸದ
ದರ್ಭಂಗಾ , ಸೋಮವಾರ, 26 ಡಿಸೆಂಬರ್ 2016 (12:42 IST)
ನೋಟು ನಿಷೇಧದ ನಂತರ ಜನಸಾಮಾನ್ಯರು ಎದುರಿಸುತ್ತಿರುವ ಸಂಕಷ್ಟಕ್ಕೆ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ನೇರ ಹೊಣೆಗಾರರಾಗಿದ್ದು ಅವರೊಬ್ಬ ಅಸಮರ್ಥ ಸಚಿವ. ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಡಬೇಕು ಎಂದು ಅಮಾನತ್ತುಗೊಂಡ ಬಿಜೆಪಿ ಸಂಸದ ಕೀರ್ತಿ ಆಜಾದ್ ವಾಗ್ದಾಳಿ ನಡೆಸಿದ್ದಾರೆ. 
 
ಸಚಿವ ಜೇಟ್ಲಿಯಿಂದ ಕೇಂದ್ರ ಸರಕಾರಕ್ಕೆ ಕೆಟ್ಟ ಹೆಸರು ಬಂದಿದೆ. ಪೂರ್ವ ತಯಾರಿಯಿಲ್ಲದೇ ನೋಟು ನಿಷೇಧ ಜಾರಿಗೊಳಿಸಿದ್ದರಿಂದ ದೇಶಾದ್ಯಂತ ಸಾಮಾನ್ಯ ಜನತೆ ತೀವ್ರ ತೆರನಾದ ಸಂಕಷ್ಟ ಎದುರಿಸುತ್ತಿದ್ದಾರೆ. ಅವರು ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
 
ಪ್ರಧಾನಮಂತ್ರಿ ನೋಟು ನಿಷೇಧ ಹೇರಿದ್ದಾರೆ. ಆದರೆ ಬ್ಯಾಂಕ್‌ಗಳು ಸಾವಿರಾರು ಕೋಟಿ ಕಪ್ಪು ಹಣವನ್ನು ವೈಟ್ ಆಗಿ ಪರಿವರ್ತಿಸುತ್ತಿವೆ. ಬ್ಯಾಂಕ್‌ಗಳಉ ಯಾರ ಆಧೀನಕ್ಕೊಳಪಡುತ್ತವೆ? ಬ್ಯಾಂಕ್‌ಗಳು ಹಣಕಾಸು ಸಚಿವಾಲಯದ ವ್ಯಾಪ್ತಿಗೆ ಒಳಪಡುವದಿಲ್ಲವೇ ಎಂದು ಪ್ರಶ್ನಿಸಿದ್ದಾರೆ. 
 
ಡಿಡಿಸಿಎಯಲ್ಲಿ ನಡೆದ ಅವ್ಯವಹಾರದಲ್ಲಿ ಜೇಟ್ಲಿ ಭಾಗಿಯಾಗಿದ್ದಾರೆ ಎಂದು ಕೀರ್ತಿ ಆಜಾದ್ ಆರೋಪಿಸಿದ್ದರಿಂದ ಅವರನ್ನು   ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಕಳೆದ ವರ್ಷ ಡಿಸೆಂಬರ್ 23 ರಂದು ಅಮಾನತ್ತುಗೊಳಿಸಿದ್ದರು.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಪ್ರಧಾನಿ ಮೋದಿಯಿಂದ ಸರ್ವಾಧಿಕಾರಿಯ ವರ್ತನೆ: ಮಲ್ಲಿಕಾರ್ಜುನ್ ಖರ್ಗೆ ಕಿಡಿ