ಕೇರಳದ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿ ಓಮನ್ ಚಾಂಡಿಯವರ ಕಾಂಗ್ರೆಸ್ ನೇತೃತ್ವದ ಯುಡಿಎಫ್ ಪಕ್ಷ ಹೀನಾಯ ಸೋಲಿನತ್ತ ಸಾಗುತ್ತಿದ್ದು ಎಲ್‌ಡಿಎಫ್ ಸರಕಾರ ರಚಿಸಲಿದೆ. ಮುಖ್ಯಮಂತ್ರಿ ರೇಸ್‌ನಲ್ಲಿ ಅಚ್ಯುತಾನಂದನ್, ಪಿ.ವಿಜಯನ್ ಮುಂಚೂಣಿಯಲ್ಲಿದ್ದಾರೆ.
ಒಟ್ಟು 140 ಸ್ಥಾನವಿರುವ ಕೇರಳದಲ್ಲಿ ಎಲ್'ಡಿಎಫ್ 92 ಸ್ಥಾನಗಳ ಮುನ್ನಡೆಯಲ್ಲಿದ್ದು, ಕಾಂಗ್ರೆಸ್ ಮೈತ್ರಿಕೂಟದ ಯುಡಿಎಫ್ ಕೇವಲ 46 ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಸಾಧಿಸಿದೆ. ಪ್ರಧಾನಿ ಮೋದಿ ಅವರ ಹವಾದೊಂದಿಗೆ ಭಾರಿ ನಿರೀಕ್ಷೆ ಮೂಡಿಸಿದ್ದ ಬಿಜೆಪಿ ಕೇವಲ ಒಂದು ಸ್ಥಾನ ಮುನ್ನಡೆಯೊಂದಿಗೆ ನೆಲ ಕಚ್ಚಿದೆ.
ಮಧ್ಯಾಹ್ನದವರೆಗೆ ಫಲಿತಾಂಶದ ಸ್ಪಷ್ಟ ಚಿತ್ರಣ ದೊರಕಲಿದ್ದು, ಎಲ್'ಡಿಎಫ್ ಪಕ್ಷವೇ ನಿರೀಕ್ಷಿತ ಬಹುಮತ ಸಾಧಿಸುವ ಸಂಭವ ನಿಚ್ಚಳವಾಗಿದೆ.
ವೆಬ್‌ದುನಿಯಾ
ಮೊಬೈಲ್ ಆಪ್ (ಡೌನ್‌ಲೋಡ್) ಮಾಡಿಕೊಂಡು ತಾಜಾ ಸುದ್ದಿಗಳನ್ನು ಪಡೆಯಿರಿ.