Select Your Language

Notifications

webdunia
webdunia
webdunia
webdunia

ಕೇಜ್ರಿವಾಲ್ ಗುಜರಾತ್ ಭೇಟಿ ರದ್ದು; ಬಿಜೆಪಿಯೇ ಕಾರಣ ಎಂದ ಆಪ್

ಕೇಜ್ರಿವಾಲ್ ಗುಜರಾತ್ ಭೇಟಿ ರದ್ದು; ಬಿಜೆಪಿಯೇ ಕಾರಣ ಎಂದ ಆಪ್
ಅಹಮದಾಬಾದ್ , ಗುರುವಾರ, 30 ಜೂನ್ 2016 (15:52 IST)
ಆಪ್ ಸಂಚಾಲಕ ಅರವಿಂದ ಕೇಜ್ರಿವಾಲ್ ಅವರ ಗುಜರಾತ್ ಭೇಟಿ ರದ್ದಾಗಿದೆ. ಇದಕ್ಕೆ ಬಿಜೆಪಿ ಒತ್ತಡವೇ ಕಾರಣ ಎಂದು ಆಪ್ ಆರೋಪಿಸುತ್ತಿದೆ.

ಕೇಜ್ರಿವಾಲ್ ಮುಂದಿನ ವಾರ ವಾಣಿಜ್ಯ ಸಂಘಗಳ ಆಹ್ವಾನದ ಮೇರೆಗೆ ಸೂರತ್‌ಗೆ ಹೋಗಬೇಕಿತ್ತು. ಆದರೆ ಗುಜರಾತ್ ಸರ್ಕಾರದ ಒತ್ತಡದಿಂದಾಗಿ ಈ ಕಾರ್ಯಕ್ರಮವನ್ನು ರದ್ದು ಪಡಿಸಲಾಗಿದೆ ಎಂಬುದು ಆಪ್ ಆರೋಪ.
 
ಸೂರತ್ ವೇಹಾಪರಿ ಮಹಾಮಂಡಲ ಜುಲೈ 10 ರಂದು ಅರವಿಂದ ಕೇಜ್ರಿವಾಲ್ ಅವರಿಗೆ ಸನ್ಮಾನ ಮತ್ತು ಉಪನ್ಯಾಸ ಕಾರ್ಯಕ್ರಮವನ್ನು ಆಯೋಜಿಸಿತ್ತು. ಜುಲೈ 9ರಂದು ಸೋಮನಾಥ ದೇವಸ್ಥಾನಕ್ಕೆ ಮರುದಿನ ಸೂರತ್‌ಗೆ ಭೇಟಿ ನೀಡಿ ಅವರು 2017ರ ಚುನಾವಣೆಯನ್ನು ಪ್ರಾರಂಭಿಸುವುದರಲ್ಲಿದ್ದರು. ಲಿಖಿತ ಆಹ್ವಾನದ ಬಳಿಕ ಕೇಜ್ರಿವಾಲ್ ಜುಲೈ 10ರಂದು ಬರಲೊಪ್ಪಿದ್ದರು. ವ್ಯಾಪಾರಿ ಸಂಘ ಕಾರ್ಯಕ್ರಮಕ್ಕಾಗಿ ಗುಜರಾತ್ ವಿಶ್ವವಿದ್ಯಾಲಯದಲ್ಲಿರುವ ವೀರ್ ನರ್ಮದ್ ಸಭಾಂಗಣವನ್ನು ಸಹ ಗೊತ್ತು ಮಾಡಿತ್ತು. ಆದjz ರಾಜ್ಯ ಸರ್ಕಾರಕ್ಕೆ ಈ ಬಗ್ಗೆ ತಿಳಿದು ಬಂದಾಗ ವ್ಯಾಪಾರಿ ಸಂಘ ಮತ್ತು ವಿಶ್ವವಿದ್ಯಾಲಯದ ಮೇಲೆ ಮೇಲೆ ಒತ್ತಡ ಹೇರಿ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಮಾಡಲಾಗಿದೆ ಎಂದು ಆಪ್ ರಾಜ್ಯಾಧ್ಯಕ್ಷ ಕನು ಕಲ್ಸರಿಯಾ ಆರೋಪಿಸಿದ್ದಾರೆ. 
 
ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಯಲ್ಲಿ ಎಲ್ಲ 182 ಸ್ಥಾನಗಳಲ್ಲಿ ಕಣಕ್ಕಿಳಿಸುವುದಾಗಿ ಆಪ್ ಈಗಾಗಲೇ ಘೋಷಿಸಿದೆ. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.

Share this Story:

Follow Webdunia kannada

ಮುಂದಿನ ಸುದ್ದಿ

ಗ್ರೀನ್ ಸೆಸ್ ಪಾವತಿಸಿದ್ರೆ ಡೀಸೆಲ್‌ ವಾಹನಗಳಿಗೆ ನೋಂದಣಿ: ಸುಪ್ರೀಂ ಕೋರ್ಟ್