Select Your Language

Notifications

webdunia
webdunia
webdunia
webdunia

ಗ್ರೀನ್ ಸೆಸ್ ಪಾವತಿಸಿದ್ರೆ ಡೀಸೆಲ್‌ ವಾಹನಗಳಿಗೆ ನೋಂದಣಿ: ಸುಪ್ರೀಂ ಕೋರ್ಟ್

ಗ್ರೀನ್ ಸೆಸ್ ಪಾವತಿಸಿದ್ರೆ ಡೀಸೆಲ್‌ ವಾಹನಗಳಿಗೆ ನೋಂದಣಿ: ಸುಪ್ರೀಂ ಕೋರ್ಟ್
ನವದೆಹಲಿ , ಗುರುವಾರ, 30 ಜೂನ್ 2016 (15:48 IST)
ಡೀಸೆಲ್ ಚಾಲಿತ ಸುವಿ ಮತ್ತು 2000 ಸಿಸಿ ಸಾಮರ್ಥ್ಯ ಹೊಂದಿರುವ ಕಾರು ಮಾಲೀಕರಿಗೆ ಸಂತಸದ ಸುದ್ದಿ, ಗ್ರೀನ್ ಸೆಸ್ ಪಾವತಿ ಮಾಡುವ ಮೂಲಕ ಡೀಸೆಲ್‌ ವಾಹನಗಳ ನೋಂದಣಿ ಮಾಡಬಹುದು ಎಂದು ಸುಪ್ರೀಂ ಕೋರ್ಟ್‌ ಆದೇಶ ಹೊರಡಿಸಿದೆ.
 
ನಾವು ವಾಹನಗಳ ನೋಂದಣಿಗೆ ಒಲವು ವ್ಯಕ್ತಪಡಿಸುತ್ತಿದ್ದು, ಒಂದು ಬಾರಿ ಗ್ರೀನ್ ಸೆಸ್ ತೆರಿಗೆ ಪಾವತಿಸುವ ಮೂಲಕ ತಮ್ಮ ವಾಹನಗಳನ್ನು ನೋಂದಣಿ ಮಾಡಿಕೊಳ್ಳಬಹುದು ಎಂದು ಮುಖ್ಯ ನ್ಯಾಯಮೂರ್ತಿ ಟಿ.ಎಸ್‌.ಠಾಕೂರ್, ಎ.ಕೆ.ಸಿಕ್ರಿ ಮತ್ತು ಆರ್ ಬಾನುಮತಿ ನೇತೃತ್ವದ ಪೀಠ ತಿಳಿಸಿದೆ.
 
ರಾಷ್ಟ್ರ ರಾಜಧಾನಿ ದೆಹಲಿ ಮತ್ತು ಎನ್‌ಸಿಆರ್ ಪ್ರದೇಶಗಳಲ್ಲಿ ಉಂಟಾಗುತ್ತಿರುವ ಅಪಾಯಕಾರಿ ಮಾಲಿನ್ಯ ತಡೆಗಟ್ಟುವ ಉದ್ದೇಶದಿಂದ ಸುಪ್ರೀಂ ಕೋರ್ಟ್ ಕಳೆದ ಡಿಸೆಂಬರ್ ತಿಂಗಳಲ್ಲಿ ಡೀಸೆಲ್ ವಾಹನ ಮತ್ತು 2000 ಸಿಸಿಗೂ ಮೇಲ್ಪಟ್ಟ ಅತ್ಯಾಧುನಿಕ ಖಾಸಗಿ ಕಾರುಗಳ ನೋಂದಣಿಯನ್ನು ನಿಷೇಧ ಮಾಡಿತ್ತು. ನಂತರ, ಡಿಸೇಲ್ ವಾಹನ ನಿಷೇಧವನ್ನು ತಾತ್ಕಾಲಿಕವಾಗಿ ಮುಂದೂಡಲಾಗಿತ್ತು. 

ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಕ್ಸಿಯೋಮಿಯಿಂದ ಮಿ. ಮ್ಯಾಕ್ಸ್ ಸ್ಮಾರ್ಟ್‌ಫೋನ್ ಮಾರುಕಟ್ಟೆಗೆ