ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಹರಿಯಾಣಾ ರಾಜ್ಯದವರಾಗಿದ್ದರಿಂದ ಅವರಿಗೆ ಪಂಜಾಬ್ ರಾಜ್ಯದ ಮೇಲೆ ಯಾವ ಪ್ರೀತಿಯೂ ಇಲ್ಲ. ತನ್ನ ರಾಜ್ಯಕ್ಕೆ ಅನುಕೂಲ ಮಾಡಿಕೊಳ್ಳಲು ಪಂಜಾಬ್‌ನಲ್ಲಿ ಅಧಿಕಾರ ಹಿಡಿಯುವ ಕನಸಿನಲ್ಲಿದ್ದಾರೆ ಎಂದು ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಆರೋಪಿಸಿದ್ದಾರೆ.
ಫತೇಹಗಢ್‌ನಲ್ಲಿ ನಡೆದ ಸಂಗತ್ ದರ್ಶನ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಕೇಜ್ರಿವಾಲ್ ಹರಿಯಾಣಾದವರಾಗಿದ್ದರಿಂದ ಅವರ ರಾಜ್ಯದ ಮೇಲೆ ಹೆಚ್ಚಿನ ಕಾಳಜಿಯಿರುತ್ತದೆಯೇ ಹೊರತು ಪಂಜಾಬ್ ರಾಜ್ಯದ ಮೇಲಲ್ಲ ಎಂದರು.
ಎಸ್‌ವೈಎಲ್ ಕೆನಾಲ್ ವಿವಾದದ ಬಗ್ಗೆ ಕೇಜ್ರಿವಾಲ್ ತಳೆದಿರುವ ನಿಲುವಿನಿಂದಾಗಿ ಪಂಜಾಬ್ ರಾಜ್ಯ ಹೆಚ್ಚುವರಿ ನೀರು ಕಳೆದುಕೊಳ್ಳಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ಒಂದು ವೇಳೆ, ಕಾಂಗ್ರೆಸ್ ಮತ್ತು ಆಮ್ ಆದ್ಮಿ ಪಕ್ಷ ಸರಕಾರ ರಚಿಸಿದಲ್ಲಿ ಪಂಜಾಬ್ ಮರಭೂಮಿಯಂತಾಗಲಿರುವುದರಿಂದ ಪಂಜಾಬ್‌ನ ಪ್ರತಿಯೊಬ್ಬ ನಾಗರಿಕರು ಒಂದು ಹನಿ ನೀರಿಗಾಗಿ ಹೋರಾಟ ಮಾಡುವಂತಹ ಸ್ಥಿತಿ ಎದುರಾಗುತ್ತದೆ ಎಂದು ಪಂಜಾಬ್ ಮುಖ್ಯಮಂತ್ರಿ ಪ್ರಕಾಶ್ ಸಿಂಗ್ ಬಾದಲ್ ಹೇಳಿದ್ದಾರೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.