ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸ್ವರ್ಣಮಂದಿರದಲ್ಲಿ ಪಾತ್ರೆಗಳನ್ನು ತೊಳೆಯುವ ಮೂಲಕ ಕ್ಷಮೆಯಾಚಿಸಿದ್ದಾರೆ.
ಆಮ್ ಆದ್ಮಿ ಪಕ್ಷ ಯುವಕರಿಗಾಗಿ ಹೊರಡಿಸಲಾಗಿದ್ದ ಪ್ರಣಾಳಿಕೆಯಲ್ಲಿ ಪಕ್ಷದ ಚಿಹ್ನೆಯೊಂದಿಗೆ ಸ್ವರ್ಣದೇವಾಲಯದ ಚಿತ್ರವನ್ನು ಪ್ರಕಟಿಸಿತ್ತು. ಇದರಿಂದ ಸಿಖ್ ಸಮುದಾಯದವರು ಕ್ಷಮೆಯಾಚಿಸುವಂತೆ ಒತ್ತಡ ಹೇರಿದ್ದರು ಎನ್ನಲಾಗಿದೆ.
ನಿನ್ನೆ ರಾತ್ರಿ ನಗರಕ್ಕೆ ಬಂದಿಳಿದ ಕೇಜ್ರಿವಾಲ್ ಸುಮಾರು 45 ನಿಮಿಷಗಳ ಕಾಲ ಪಾತ್ರೆಗಳನ್ನು ತೊಳೆದು, ನಂತರ ದೇವಾಲಯದಲ್ಲಿ ಸಿಕ್ ಸಮುದಾಯದ ಕ್ಷಮೆಯಾಚಿಸಿದರು. ನಂತರ ಸುಮಾರು ಅರ್ಧಗಂಟೆಗಳ ಕಾಲ ಮೌನವಾಗಿ ಕುಳಿತು ಪ್ರಾರ್ಥನೆ ಸಲ್ಲಿಸಿದರು ಎಂದು ಆಪ್ ನಾಯಕರು ತಿಳಿಸಿದ್ದಾರೆ.
ನಾವು ಯುವಕರಿಗಾಗಿ ಹೊರಡಿಸಿದ ಪ್ರಣಾಳಿಕೆಯಲ್ಲಿ ಗೊತ್ತಿದ್ದೋ ಅಥವಾ ಇಲ್ಲವೋ ಮಾಡಿರುವ ತಪ್ಪಿಗಾಗಿ ಕ್ಷಮೆ ಕೋರಲು ಇಲ್ಲಿಗೆ ಬಂದಿದ್ದೇನೆ. ದೇವಾಲಯದಲ್ಲಿ ಸೇವೆ ಸಲ್ಲಿಸಿ ಶಹಾಬಾದ್ ಕೀರ್ತನ್ ಕೇಳಿದ ನಂತರ ಮನಸ್ಸು ತುಂಬಾ ಹಗುರವಾಗಿದೆ ಎಂದು ಸುದ್ದಿಗಾರರಿಗೆ ತಿಳಿಸಿದರು.
ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ಆರೋಪ ಎದುರಿಸುತ್ತಿರುವ ಆಪ್ ವಕ್ತಾರ ಆಶೀಶ್ ಖೇತಾನ್ ಕೂಡಾ ಕೇಜ್ರಿವಾಲ್ ಅವರೊಂದಿಗೆ ಉಪಸ್ಥಿತರಿದ್ದರು ಎನ್ನಲಾಗಿದೆ.
ತಾಜಾ ಸುದ್ದಿಗಳಿಗಾಗಿ ವೆಬ್ ದುನಿಯಾ
ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ.