Select Your Language

Notifications

webdunia
webdunia
webdunia
webdunia

ಗನ್ ಮೂಲಕ ಕಾಶ್ಮೀರ ಸಮಸ್ಯೆಯನ್ನು ಬಗೆ ಹರಿಸಲಾಗುವುದಿಲ್ಲ: ಮುಫ್ತಿ

ಗನ್ ಮೂಲಕ ಕಾಶ್ಮೀರ ಸಮಸ್ಯೆಯನ್ನು ಬಗೆ ಹರಿಸಲಾಗುವುದಿಲ್ಲ: ಮುಫ್ತಿ
ಶ್ರೀನಗರ , ಬುಧವಾರ, 17 ಆಗಸ್ಟ್ 2016 (17:54 IST)
ಬಂದೂಕಿನ ಮೂಲಕ ಕಾಶ್ಮೀರದ ಸಮಸ್ಯೆನ್ನು ಬಗೆ ಹರಿಸಲಾಗುವುದಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರದ ಸಿಎಂ ಮೆಹಬೂಬಾ ಮುಫ್ತಿ ಹೇಳಿದ್ದಾರೆ.
 
ಯಾವುದೇ ಸಮಸ್ಯೆಯನ್ನು ಗನ್ ಮೂಲಕ ಬಗೆಹರಿಸಲಾಗುವುದಿಲ್ಲ. ಮಾತುಕತೆಯೊಂದೇ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ಮಾರ್ಗ ಎಂದಿದ್ದಾರೆ ಮುಫ್ತಿ.
 
ಎಲ್ಲ ಮಧ್ಯವರ್ತಿಗಳ ಜತೆ ಮಾತುಕತೆ ನಡೆಸುವ ಮೂಲಕ ರಾಜ್ಯ ಎದುರಿಸುತ್ತಿರುವ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳನ್ನು ಬಗೆಹರಿಸುವತ್ತ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಹತ್ವದ ನಡೆಯನ್ನಿಡಲಿದೆ ಎಂಬ ಭರವಸೆಯನ್ನು ಅವರು ವ್ಯಕ್ತ ಪಡಿಸಿದ್ದಾರೆ. 
 
ಕಾಶ್ಮೀರದ ಸನ್ನಿವೇಶವನ್ನು ಸಂಸತ್ತಿನ ಎರಡು ಸದನಗಳಲ್ಲಿ ಚರ್ಚಿಸಲಾಗಿದೆ. 2008 ಮತ್ತು 2010 ಪುನರಾವರ್ತನೆಯಾಗುವುದಿಲ್ಲ ಎಂದು ನಂಬಿರುತ್ತೇನೆ. ಈ ಬಾರಿ ರಾಜ್ಯದ ರಾಜಕೀಯ, ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳು ಚರ್ಚೆಗೊಳಪಡುವ ಭರವಸೆ ನನಗಿದೆ. ಪ್ರತಿಯೊಬ್ಬರ ಜತೆ ಮಾತುಕತೆಯಾಗಬೇಕು ಎಂದು ಅವರು ಹೇಳಿದ್ದಾರೆ. 
 
'ಜಮ್ಮು ಮತ್ತು ಕಾಶ್ಮೀರದ ಜನರು ಕೆಟ್ಟವರಲ್ಲ. ಭಾರತವೂ ಕೆಟ್ಟದಲ್ಲ.  ಚುನಾವಣಾ ಲಾಭಕ್ಕಾಗಿ ತಪ್ಪನ್ನೆಸಗಲಾಗಿದೆ', ಎಂದಿದ್ದಾರೆ ಮುಫ್ತಿ. 
 
ಆಗಸ್ಟ್ 15 ರಂದು ಧ್ವಜಾರೋಹಣ ನಡೆಸಿ ಮಾತನ್ನಾಡುತ್ತಿದ್ದ ಅವರು, ಪ್ರಜಾಪ್ರಭುತ್ವದ ಬಹುದೊಡ್ಡ ಭಾಗ ಮಾತುಕತೆ. ಈ ಮೂಲಕ ನಾವು ಅನೇಕ ಸಮಸ್ಯೆಗಳಮ್ಮು ಬಗೆಹರಿಸಿದ್ದೇನೆ. ಆದರೆ ಕಾಶ್ಮೀರದ ವಿಷಯದಲ್ಲಿ ಯಾಕೆ ಸೋತಿದ್ದೇವೆ? ನಾವು ತಪ್ಪೆಸಗಿದ್ದು ಎಲ್ಲಿ? ಎಂದವರು ಭಾವನಾತ್ಮಕವಾಗಿ ಮಾತನ್ನಾಡಿದರು. 

Share this Story:

Follow Webdunia kannada

ಮುಂದಿನ ಸುದ್ದಿ

ತಮಿಳುನಾಡು: 89 ಡಿಎಂಕೆ ಶಾಸಕರನ್ನು ಅಮಾನತ್ತುಗೊಳಿಸಿದ ಸಭಾಪತಿ