Select Your Language

Notifications

webdunia
webdunia
webdunia
webdunia

ಗಡಿಯಲ್ಲಿ ಮತ್ತೆ ಉಗ್ರ ಅಟ್ಟಹಾಸ

ಗಡಿಯಲ್ಲಿ ಮತ್ತೆ ಉಗ್ರ ಅಟ್ಟಹಾಸ
ಬಂಡಿಪೋರ್ , ಗುರುವಾರ, 29 ಡಿಸೆಂಬರ್ 2016 (12:42 IST)
ಗಡಿಯಲ್ಲಿ ಉಗ್ರರು ಮತ್ತೆ ಅಟ್ಟಹಾಸವನ್ನು ಮೆರೆದಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಬಂಡಿಪೋರ್‌ ಜಿಲ್ಲೆಯ ಶಹಗುಂದ್‌ನಲ್ಲಿ ಗುರುವಾರ ಮುಂಜಾನೆ ಉಗ್ರರು ಮತ್ತು ಭಾರತೀಯ ಸೇನೆ ನಡುವೆ ಗುಂಡಿನ ಚಕಮಕಿ ನಡೆದಿದೆ. 
ಮೂರರಿಂದ ನಾಲ್ವರು ಭಯೋತ್ಪಾದಕರು ಸೇನೆಯನ್ನು ಗುರಿಯಾಗಿಸಿಕೊಂಡು ದಾಳಿಯನ್ನು ನಡೆಸಿದ್ದು, ಭಾರತೀಯ ಸೈನೆ ಕೂಡ ಪ್ರತ್ಯುತ್ತರವನ್ನು ನೀಡುತ್ತಿದೆ. 
 
ಗುಂಡಿನ ಚಕಮಕಿಯಲ್ಲಿ ಇಬ್ಬರು ಜವಾನರು ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.  ಅಡಗಿರುವ ಉಗ್ರರ ಶೋಧಕಾರ್ಯಾಚರಣೆ ಮುಂದುವರೆದಿದೆ.
 
ಭಾರತೀಯ ಸೇನೆ ಪಾಕ್ ಆಕ್ರಮಿಕ ಕಾಶ್ಮೀರದಲ್ಲಿ ಸೀಮಿತ ದಾಳಿ ನಡೆಸಿದ ಬಳಿಕ ಗಡಿಯಲ್ಲಿ ಉಗ್ರ ತಂಟೆ ಹೆಚ್ಚಾಗಿದೆ.
 

Share this Story:

Follow Webdunia kannada

ಮುಂದಿನ ಸುದ್ದಿ

ಮಾಜಿ ಸಿಎಂ ಜಯಲಲಿತಾ ಸಾವಿನ ಬಗ್ಗೆ ಹೈಕೋರ್ಟ್ ಅನುಮಾನ