ತಮಿಳುನಾಡಿನ ಕರೂರಿನಲ್ಲಿ ರ್ಯಾಲಿಯಲ್ಲಿ ಸಂಭವಿಸಿದ ಭೀಕರ ಕಾಲ್ತುಳಿತ ಸಂಬಂಧ ಸಾಮಾಜಿಕ ಜಾಲತಾಣದಲ್ಲಿ ನಟ ವಿಜಯ್ ಅವರನ್ನು ಅರೆಸ್ಟ್ ಮಾಡಿ ಎಂಬ ಕೂಗು ಕೇಳಿಬರುತ್ತಿದೆ.
ಸಾಮಾಜಿಕ ಜಾಲತಾಣದಲ್ಲಿ ವಿಜಯ್ ಬಂಧನಕ್ಕೆ ಜನರು ಒತ್ತಾಯಿಸುತ್ತಿದ್ದಾರೆ. "12 ಗಂಟೆಗೆ ಬರುವುದಾಗಿ ಹೇಳಿದ್ದರೂ ವಿಜಯ್ ತಡಮಾಡಿದ್ದರಿಂದ ಕ್ರೂರ ಘಟನೆ ಸಂಭವಿಸಿದೆ. ಓ ಪೊಲೀಸರೇ ಕೂಡಲೇ ವಿಜಯ್ ಅವರನ್ನು ಅರೆಸ್ಟ್ ಮಾಡಿ ಎಂದು ಆಕ್ರೋಶ ಹೊರಹಾಕುತ್ತಿದ್ದಾರೆ.
ಈ ದುರ್ಘಟನೆಯಲ್ಲಿ 31 ಮಂದಿ ಸಾವನ್ನಪ್ಪಿದ್ದಾರೆ ಮತ್ತು ಅನೇಕರು ಗಾಯಗೊಂಡಿದ್ದಾರೆ. ಇನ್ನೂ ಯಾರ್ಲಿಯಲ್ಲಿ ಪಾಲ್ಗೊಂಡ ಕೆಲವರು ಮೂರ್ಛೆ ಹೋಗುತ್ತಿರುವು ಭಯವು ಗೊಂದಲಕ್ಕೆ ಕಾರಣವಾಯಿತು.
ರ್ಯಾಲಿಯಲ್ಲಿ ಹಲವಾರು ಪಾಲ್ಗೊಳ್ಳುವವರು ಮೂರ್ಛೆ ಹೋಗಿದ್ದಾರೆಂದು ವರದಿಯಾಗಿದೆ ಮತ್ತು ಅವರಲ್ಲಿ ಕೆಲವರನ್ನು ಚಿಕಿತ್ಸೆಗಾಗಿ ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಸ್ಥಳದಲ್ಲಿ ಕಿಕ್ಕಿರಿದ ಜನಸಂದಣಿಯು ಭೀತಿ ಮತ್ತು ನಂತರದ ಕಾಲ್ತುಳಿತ ಪರಿಸ್ಥಿತಿಯನ್ನು ಪ್ರಚೋದಿಸಿತು ಎಂದು ಮೂಲಗಳು ಹೇಳಿವೆ.