Select Your Language

Notifications

webdunia
webdunia
webdunia
webdunia

ಕರ್ನಾಟಕದ ಐಎಎಸ್ ಅದಿಕಾರಿ ಸಹೋದರಿ ನಿಗೂಢ ಸಾವು

ಕರ್ನಾಟಕದ ಐಎಎಸ್ ಅದಿಕಾರಿ ಸಹೋದರಿ ನಿಗೂಢ ಸಾವು
ವಿಜಯವಾಡ , ಭಾನುವಾರ, 6 ಆಗಸ್ಟ್ 2017 (21:07 IST)
ಕರ್ನಾಟಕದ ಐಎಎಸ್ ಅದಿಕಾರಿ, ಕಲಬುರಗಿ ಜಿಲ್ಲ ಪಂಚಾಯ್ತಿ ಸಿಇಓ ಹೆಬ್ಸಿಬಾ ರಾಣಿ ಸಹೋದರಿ ಸೂರ್ಯಕುಮಾರಿ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದಾರೆ. 5 ದಿನಗಳಿಂದ ನಾಪತ್ತೆಯಾಗಿದ್ದ ವೈದ್ಯೆ ಸೂರ್ಯಕುಮಾರಿ ವಿಜಯವಾಡದ ರಾಯ್ವೇಸ್ ಕಾಲುವೆ ಬಳಿ ಕೊಳೆತ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.

ಕಾಲುವೆ ಬಳಿ ವೈದ್ಯೆಯ ಕಾರು ಅನಾಥವಾಗಿ ನಿಂತಿದ್ದನ್ನ ಕಾರನ್ನ ಗಮನಿಸಿದ ಸ್ಥಳೀಯರು ಪೊಲಿಸರಿಗೆ ಮಾಹಿತಿ ನೀಡಿದ್ದಾರೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ದಳ ಕಾರ್ಯಾಚರಣೆ ನಡೆಸಿ ಕಾಲುವೆಯಲ್ಲಿ ಶವ ಹೊರತೆಗೆದಿದ್ದಾರೆ, ಶವ ಕೊಳೆತು ಗುರುತು ಹಿಡಿಯಲಾಗದಷ್ಟು ಹಾಳಾಗಿತ್ತು ಎಂದು ತಿಳಿದು ಬಂದಿದೆ.

 ವೈದ್ಯೆ ನಾಪತ್ತೆಯಾದಾಗಲೇ ಪೋಷಕರು ನೀಡಿದ ಅಪಹರಣ ದೂರಿನ ಮೇರೆಗೆ ಟಿಡಿಪಿ ಮಾಜಿ ಶಾಸಕ ಜಯರಾಜ್ ಮಗ ವಿದ್ಯಾಸಾಗರ್`ನನ್ನ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದರು. ಸೂರ್ಯಕುಮಾರಿಯ ಕೊನೆಯ ಮೆಸೇಜ್ ವಿದ್ಯಾಸಾಗರ್`ಗೆ ಹೋಗಿದ್ದು ನೀನಿಲ್ಲದೆ ನಾನು ಬದುಕುವುದಿಲ್ಲ ಎಂದಿರುವುದು ಭಾರೀ ಅನುಮಾನಕ್ಕೆ ಎಡೆಮಾಡಿದೆ. ವಿದ್ಯಾಸಾಗರ್`ಗೆ ಮದುವೆಯಾಗಿ 2 ಮಕ್ಕಳಿದ್ದರೂ ವೈದ್ಯೆ ಜೊತೆ ಪ್ರೇಮದಾಟವಾಡಿದ್ದ ಎನ್ನಲಾಗಿದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ

Share this Story:

Follow Webdunia kannada

ಮುಂದಿನ ಸುದ್ದಿ

ಗುಜರಾತ್ ಕಾಂಗ್ರೆಸ್ ಶಾಸಕರು ಇಂದು ರಾತ್ರಿ ತವರಿಗೆ ವಾಪಸ್