Publish Date: Sun, 14 Jan 2018 (14:30 IST)
Updated Date: Sun, 14 Jan 2018 (14:34 IST)
ಗೋವಾ ನೀರಾವರಿ ಸಚಿವ ವಿನೋದ್ ಪಾಲ್ಯೇಕರ್ ಅವರು ಕನ್ನಡಿಗರನ್ನು ಹರಾಮ್ ಕೋರರು ಎಂದು ಹೇಳುವ ಮೂಲಕ ಕನ್ನಡಿಗರನ್ನು ಕೆರಳಿಸಿದ್ದಾರೆ.
ಮಹಾದಾಯಿ ನೀರಾವರಿ ಯೋಜನೆ ಸಂಬಂಧ ಸ್ಥಳ ಪರಿಶೀಲನೆಗೆ ಬಂದಿದ್ದ ಗೋವಾ ಸಚಿವರು ಕನ್ನಡಿಗರು ಹರಾಮ್ ಕೋರರು, ಅವರು ಏನು ಬೇಕಾದರೂ ಮಾಡಬಹದು. ಆದ್ದರಿಂದ ಭದ್ರತೆಯೊಂದಿಗೆ ಬಂದಿದ್ದೇನೆ ಎಂದು ಅವಮಾನಿಸುವ ಮಾತುಗಳನ್ನಾಡಿದ್ದಾರೆ.
ಗೋವಾ ಸಚಿವರ ಹೇಳಿಕೆಯಿಂದ ಕನ್ನಡಿಗರಿಂದ ಆಕ್ರೋಶ ವ್ಯಕ್ತವಾಗಿದ್ದು, ಕನ್ನಡಪರ ಸಂಘಟನೆಗಳು ಗೋವಾ ಸಚಿವರ ವಿರುದ್ಧ ಕೆಂಡಕಾರಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ
ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.