Publish Date: Wed, 19 Oct 2016 (10:40 IST)
Updated Date: Wed, 19 Oct 2016 (11:15 IST)
ನವದೆಹಲಿ: ರಾಷ್ಟ್ರ ಮಟ್ಟದ ಕಬ್ಬಡ್ಡಿ ಆಟಗಾರ ರೋಹಿತ್ ಚಿಲ್ಲರ್ ಅವರ ಪತ್ನಿ ತಮ್ಮ ತವರು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ. ಸ್ಥಳದಲ್ಲಿ ಡೆತ್ ನೋಟ್ ಸಹ ಪತ್ತೆಯಾಗಿದೆ.
ಪಶ್ಚಿಮ ದೆಹಲಿಯ ನಂಗೋಲಿ ಪ್ರದೇಶದಲ್ಲಿರುವ ತಮ್ಮ ನಿವಾಸದಲ್ಲಿ ಲಲಿತಾ(27) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಅವರ ತಂದೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಆತ್ಮಹತ್ಯೆ ಮಾಡಿಕೊಂಡ ಸ್ಥಳದಲ್ಲಿ ತಂದೆಯನ್ನುದ್ದೇಶಿಸಿ ಎರಡು ಪುಟದ ಡೆತ್ ನೋಟ್ ಬರೆದಿಟ್ಟಿರುವ ಲಲಿತಾ, ಪತಿ ಮತ್ತು ಆತನ ಫೋಷಕರು ವರದಕ್ಷಿಣೆ ಹಿಂಸೆ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ರೋಹಿತ್ ಮತ್ತು ಲಲಿತಾ ಕಳೆದ 7 ತಿಂಗಳ ಹಿಂದೆ ಮದುವೆಯಾಗಿದ್ದರು.
ರೋಹಿತ್ ಮತ್ತು ಆತನ ಪೋಷಕರ ವಿರುದ್ಧ ಪೊಲೀಸರು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ. ಭಾರತೀಯ ನೌಕಾ ಸೇನೆ ಉದ್ಯೋಗಿಯಾಗಿರುವ ರೋಹಿತ್, ನಾಲ್ಕನೇ ಆವೃತ್ತಿಯ ಪ್ರೋ ಕಬ್ಬಡ್ಡಿ ಲೀಗ್‌ನಲ್ಲಿ ರೋಹಿತ್ ಬೆಂಗಳೂರು ಬುಲ್ಸ್ ಪರ ಕಾಣಿಸಿಕೊಂಡಿದ್ದರು.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ.