Select Your Language

Notifications

webdunia
webdunia
webdunia
webdunia

ದೇಶದ ಮುಖ್ಯ ನ್ಯಾಯಾಧೀಶರಾದ ನ್ಯಾ. ಜಗದೀಶ್ ಸಿಂಗ್ ಖೇಹರ್

ದೇಶದ ಮುಖ್ಯ ನ್ಯಾಯಾಧೀಶರಾದ ನ್ಯಾ. ಜಗದೀಶ್ ಸಿಂಗ್ ಖೇಹರ್
ನವದೆಹಲಿ , ಬುಧವಾರ, 4 ಜನವರಿ 2017 (14:25 IST)
ನ್ಯಾ. ಜಗದೀಶ್ ಸಿಂಗ್ ಖೇಹರ್ ದೇಶದ 44ನೇ ಮುಖ್ಯ ನ್ಯಾಯಾಧೀಶರಾಗಿ ಬುಧವಾರ ಪ್ರಮಾಣವಚನ ಸ್ವೀಕರಿಸಿದ್ದಾರೆ.  
ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರು ರಾಷ್ಟ್ರಪತಿ ಭವನದಲ್ಲಿ ಖೇಹರ್ ಅವರಿಗೆ ಪ್ರಮಾಣವಚನವನ್ನು ಬೋಧಿಸಿದರು. 
 
64ರ ಹರೆಯದ ಖೇಹರ್ ಸಿಖ್ ಸಮುದಾಯದವರಾಗಿದ್ದು 7 ತಿಂಗಳ ಕಾಲ ಅಂದರೆ ಆಗಸ್ಟ್ 27ರವರೆಗೆ ದೇಶದ ಮುಖ್ಯ ನ್ಯಾಯಮೂರ್ತಿಯಾಗಿ ಕಾರ್ಯ ನಿರ್ವಹಿಸಲಿದ್ದಾರೆ. 
 
ಖೇಹರ್‌ ಅವರ ಹೆಸರನ್ನು ನಿರ್ಗಮಿತ ಮುಖ್ಯ ನ್ಯಾಯಮೂರ್ತಿ ಟಿ.ಎಸ್. ಠಾಕೂರ್‌ ಶಿಫಾರಸು ಮಾಡಿದ್ದರು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಡಿ.19ರಂದು ಮುಖ್ಯ ನಾಯದೀಶರ ಹುದ್ದೆಗೆ ಜಗದೀಶ್ ಸಿಂಗ್ ಖೇಹರ್ ಅವರ ಹೆಸರಿಗೆ ಅನುಮೋದನೆ ನೀಡಿ ಅಂಕಿತ ಹಾಕಿದ್ದರು.
 
ಖೇಹರ್‌ ಅವರು ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ಸಹ ಕಾರ್ಯ ನಿರ್ವಹಿಸಿದ್ದರು. ಟಿ.ಎಸ್. ಠಾಕೂರ್‌ ಜನವರಿ 3 ರಂದು ನಿವೃತ್ತರಾಗಿದ್ದರು.
 
ಸುಪ್ರೀಂಕೋರ್ಟ್‌ನಲ್ಲಿರುವ  ನ್ಯಾಯಮೂರ್ತಿಗಳ ಪೈಕಿ ಹಿರಿಯವರಾಗಿರುವ ಖೇಹರ್‌  ಸಿಖ್‌ ಸಮುದಾಯದಿಂದ ಸಿ.ಜೆ ಹುದ್ದೆಗೇರುತ್ತಿರುವವರಲ್ಲಿ ಮೊದಲಿಗರು.
 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

Share this Story:

Follow Webdunia kannada

ಮುಂದಿನ ಸುದ್ದಿ

ಉ.ಪ್ರದೇಶ ವಿಧಾನಸಭೆ ಚುನಾವಣೆ: ಬಿಜೆಪಿಗೆ 300 ಸೀಟುಗಳಲ್ಲಿ ಜಯ ಖಚಿತ ಎಂದ ಗೋಯಲ್