Select Your Language

Notifications

webdunia
webdunia
webdunia
webdunia

ಜೆಎನ್‌‌ಯುವಿನಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ

ಜೆಎನ್‌‌ಯುವಿನಲ್ಲಿ ವಿದ್ಯಾರ್ಥಿನಿಯ ಮೇಲೆ ಅತ್ಯಾಚಾರ
ನವದೆಹಲಿ , ಸೋಮವಾರ, 22 ಆಗಸ್ಟ್ 2016 (12:57 IST)
ಜವಾಹರಲಾಲ್ ವಿಶ್ವವಿದ್ಯಾಲಯ ಮತ್ತೆ ಸುದ್ದಿಯಲ್ಲಿದೆ. ಅಲ್ಲಿನ ಸಂಶೋಧನಾ ವಿದ್ಯಾರ್ಥಿಯೋರ್ವಳು ತನ್ನ ಸೀನಿಯರ್ ಅತ್ಯಾಚಾರ ಎಸಗಿದ್ದಾನೆ ಎಂದು ದೂರು ನೀಡಿದ್ದಾಳೆ. ಶನಿವಾರ ಸಂಜೆ ಈ ವಿಶ್ವವಿದ್ಯಾಲಯದ ಆವರಣದೊಳಗೆ ಈ ಘಟನೆ ನಡೆದಿತ್ತು ಎಂದು ಹೇಳಲಾಗುತ್ತಿದೆ. 
 
ಆರೋಪಿಯನ್ನು 'ಅನಮೋಲ್ ರತನ್' ಎಂದು ಗುರುತಿಸಲಾಗಿದೆ ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
 
ಪೀಡಿತೆಯ ದೂರಿನ ಆಧಾರದ ಮೇಲೆ ಎಫ್ಐಆರ್ ದಾಖಲಿಸಿರುವ ವಸಂತ ಕುಜ್ (ಉತ್ತರ) ಪೊಲೀಸರು ಆರೋಪಿ ವಿರುದ್ಧ 376(ಅತ್ಯಾಚಾರ) ಮಚ್ಚು 506 (ಕ್ರಿಮಿನಲ್ ಇನ್‌ಫಾರ್ಮೇಶನ್) ಅಡಿಯಲ್ಲಿ ಪ್ರಕರಣ ದಾಖಲಾಗಿದೆ. 
 
ಪೊಲೀಸರು ನೀಡಿರುವ ಮಾಹಿತಿಯ ಪ್ರಕಾರ ಪೀಡಿತೆ ಪ್ರಥಮ ವರ್ಷದ ಸಂಶೋಧನಾ ವಿದ್ಯಾರ್ಥಿನಿಯಾಗಿದ್ದಾಳೆ. ಇತ್ತೀಚಿಗೆ ಆಕೆ ಯಾರಾದರೂ ಮರಾಠಿ ಚಿತ್ರ ಸೈರಾಟ್ ಡಿಜಿಟಲ್ ಪ್ರತಿಯನ್ನು ಹೊಂದಿದ್ದೀರಾ? ಎಂದು ಫೇಸ್‌ಬುಕ್‌ನಲ್ಲಿ ಕೇಳಿಕೊಂಡಿದ್ದಳು. ಈ ಮೂಲಕ ಆರೋಪಿಯ ಜತೆ ಆಕೆಯ ಸಂಪರ್ಕವಾಗಿತ್ತು. 
 
ನನ್ನ ಬಳಿ ಸಿನಿಮಾದ ಡಿಜಿಟಲ್ ಪ್ರತಿ ಇದೆ ಎಂದು ಆಕೆಯನ್ನು ತನ್ನ ಹಾಸ್ಟೆಲ್‌ಗೆ ಕರೆದೊಯ್ದ ಆತ ಮತ್ತು ತರಿಸುವ ಪಾನೀಯ ನೀಡಿ ಅತ್ಯಾಚಾರ ಎಸಗಿದ್ದಾನೆ ಎಂದು ಹೇಳಲಾಗುತ್ತಿದೆ. 
 
ಆರೋಪಿ ಅಖಿಲ ಭಾರತ ವಿದ್ಯಾರ್ಥಿ ಸಂಘ(AISA)ದ ಕಾರ್ಯಕರ್ತ ಕೂಡ ಎಂದು ತಿಳಿದು ಬಂದಿದೆ. 

Share this Story:

Follow Webdunia kannada

ಮುಂದಿನ ಸುದ್ದಿ

ಗೋವಿನ ವಿಷಯದಲ್ಲಿ ಕೇಂದ್ರ ಸರಕಾರ ಡಬಲ್ ಗೇಮ್: ಮಲ್ಲಿಕಾರ್ಜುನ ಖರ್ಗೆ