Select Your Language

Notifications

webdunia
webdunia
webdunia
webdunia

ಜಿಯೋ ಪ್ರೈಮರಿ ಮೆಂಬರ್ ಶಿಪ್ ಪಡೆಯಲು ಸುವರ್ಣಾವಕಾಶ

ಜಿಯೋ ಪ್ರೈಮರಿ ಮೆಂಬರ್ ಶಿಪ್ ಪಡೆಯಲು ಸುವರ್ಣಾವಕಾಶ
NewDelhi , ಶನಿವಾರ, 1 ಏಪ್ರಿಲ್ 2017 (08:36 IST)
ನವದೆಹಲಿ: ರಿಲಯನ್ಸ್ ಸಂಸ್ಥೆಯ ಜಿಯೋ ಪ್ರೈಮರಿ ಮೆಂಬರ್ ಶಿಪ್ ಪಡೆದುಕೊಳ್ಳಲು ಬಯಸುವರಿಗೊಂದು ಸುವರ್ಣಾವಕಾಶ. ನಿನ್ನೆಗೆ ಕೊನೆಗೊಳ್ಳಬೇಕಾಗಿದ್ದ, ಪ್ರೈಮರಿ ಮೆಂಬರ್ ಶಿಪ್ ಅವಧಿ ಇನ್ನೂ 15 ದಿನ ವಿಸ್ತರಣೆಯಾಗಿದೆ.

 

ಅಂದರೆ ಏಪ್ರಿಲ್ 15 ರವರೆಗೆ ಪ್ರೈಮರಿ ಮೆಂಬರ್ ಶಿಪ್ ಪಡೆದುಕೊಳ್ಳಬಯಸುವವರಿಗೆ ಅವಕಾಶ ಒದಗಿ ಬರಲಿದೆ. ಅಲ್ಲದೆ ಏಪ್ರಿಲ್ 15 ರೊಳಗೆ 303 ರೂ. ಪ್ಲ್ಯಾನ್ ಖರೀದಿಸಿದವರಿಗೆ, ಮೂರು ತಿಂಗಳ ಹೆಚ್ಚುವರಿ ಆಫರ್ ನೀಡಲಾಗಿದೆ.

 
ಗ್ರಾಹಕರ ಬಹು ಬೇಡಿಕೆಯ ಮೇರೆಗೆ ಅವಧಿ ವಿಸ್ತರಿಸಲಾಗಿದೆ ಎಂದು ಸಂಸ್ಥೆ ಹೇಳಿದೆ. ಈಗಾಗಲೇ ಪ್ರೈಮ್ ಮೆಂಬರ್ ಶಿಪ್ ಪಡೆದ ಗ್ರಾಹಕರಿಗೆ 3 ತಿಂಗಳ ಸೇವೆ ಉಚಿತವಾಗಿ ದೊರಕಲಿದೆ. ಈಗ ರಿಚಾರ್ಜ್ ಮಾಡಿದ 303 ರೂ. ಅಥವಾ ಹೆಚ್ಚುವರಿ ಮೊತ್ತದ ಪ್ಲ್ಯಾನ್ ಜುಲೈನಿಂದ ಜಾರಿಗೆ ಬರಲಿದೆ ಎಂದು ಸಂಸ್ಥೆ ಹೇಳಿದೆ.

 
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ   

Share this Story:

Follow Webdunia kannada

ಮುಂದಿನ ಸುದ್ದಿ

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಭಾರೀ ಪ್ರಮಾಣದ ಇಳಿಕೆ